ಮುಂದಿನ 15 ದಿನ ಇಸ್ಕಾನ್ ದೇಗುಲದ ಬಾಗಿಲು ತೆರೆಯಲ್ಲ

ಬೆಂಗಳೂರು: ರಾಜ್ಯವ್ಯಾಪಿ ಖ್ಯಾತಿ ಗಳಿಸಿರುವ ಬೆಂಗಳೂರಿನ ರಾಜಾಜಿನಗರದ ಇಸ್ಕಾನ್ ಕೃಷ್ಣ ಮಂದಿರವನ್ನು ಮುಂದಿನ 15 ದಿನಗಳ ಕಾಲ ತೆರೆಯಲಾಗುವುದಿಲ್ಲ ಎಂಬುದಾಗಿ ದೇವಸ್ಥಾನದ ಆಡಳಿತ ಮಂಡಳಿಯು ಇಂದು ಸ್ಪಷ್ಟಪಡಿಸಿದೆ.

ದೇಶವ್ಯಾಪ್ತಿ 5ನೇ ಹಂತದ ಲಾಕ್ ಡೌನ್ ಹೇರಲಾಗಿದ್ದು, ಈ ನಡುವೆ ನಾಳೆಯಿಂದ ದೇಗುಲಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಅಲ್ಲದೇ ಕೆಲ ನಿಯಮಗಳನ್ನು ಪಾಲಿಸುವಂತೆಯೂ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ರಾಜ್ಯದ ಹಲವು ದೇವಸ್ಥಾನಗಳ ಬಾಗಿಲು ತೆರೆಯುವ ಸಾಧ್ಯತೆ ಇದೆ.