ಬೆಂಗಳೂರು: ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಲಿದೆ ಎನ್ನಲಾಗಿದೆ. ಕಳೆದ ವರ್ಷದ ಮಾರ್ಚ್​ಗೆ ಹೋಲಿಸಿದರೆ ಗರಿಷ್ಠ ತಾಪಮಾನ ಈ ಮಾರ್ಚ್​ನಲ್ಲಿ ಅಂದಾಜು 2 ಡಿ.ಸೆ. ಹೆಚ್ಚಾಗಿದೆ.

ಇನ್ನು 1996ರ ಮಾ.29ರಂದು 37.3 ಡಿ.ಸೆ. ದಾಖಲಾಗಿರುವುದು ಮಾರ್ಚ್​ನಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ತಾಪಮಾನವಾಗಿದೆ.

ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗದ ಕೆಲವೆಡೆ ಮುಂದಿನ ಒಂದು ವಾರ ತುಂತುರು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಬಿಸಿಲಿನ ಬೇಗೆಯಿಂದ ಕೊಂಚ ರಿಲೀಫ್ ಸಿಗಲಿದೆ ಎಂಬುದು ಸುದ್ದಿ.