ಹೊಸದಿಲ್ಲಿ: ಚುನಾವಣೆಯಲ್ಲಿ ರಾಹುಲ್ ಗಾಂಧಿ ದೇಶದ  ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ  ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

ಇಲ್ಲಿಯ  ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಂಗ್ರೆಸ್ 84 ನೇ ಮಹಾಧೀವೇಶನದಲ್ಲಿ ಮಾತನಾಡಿದ  ಅವರು, ಇಷ್ಟರಲ್ಲಿಯೇ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಭಾರೀ ಬಹುಮತದಿಂದ ಪಕ್ಷ  ಅಧಿಕಾರಕ್ಕೆ ಬರಲಿದ್ದು, ಲೋಕಸಭಾ ಚುನಾವಣೆಗೆ ಇದು ಮೆಟ್ಟಿಲಾಗಲಿದೆ.

ಸೋನಿಯಾ ಗಾಂಧಿ, ಡಾ. ಮನಮೋಹನಸಿಂಗ್ , ರಾಹುಲ್ ಗಾಂಧಿ ಮೊದಲಾದವರ   ಆಶೀರ್ವಾದದಿಂದ 2013 ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ಧ ಭರವಸೆಗಳಲ್ಲಿ ಶೇ. 90 ರಷ್ಟನ್ನು ತಮ್ಮಪಕ್ಷ ಈಡೇರಿಸಿೆದೆ  ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.