ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಸವರ್ಣೀಯರಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ 10% ಮೀಸಲಾತಿ ನೀಡುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ನಿನ್ನೆ ಸ ಹಿ ಹಾಕಿದ್ದಾರೆ

ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದ್ದು, ಈಗ ಮೀಸಲಾತಿ ಮಸೂದೆಯು ಕಾನೂನಿನ ರೂಪ ಪಡೆದಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮುಂದಿನ ವಾರದೊಳಗಾಗಿ ಮೀಸಲಾತಿ ಸಂಬಂಧಿತ ನಿಯಮಾವಳಿಗಳಿಗೆ ಅಂತಿಮ ರೂಪವನ್ನು ನೀಡಲಿದೆ ಎಂದು ತಿಳಿದುಬಂದಿದೆ.