ನವದೆಹಲಿ: ಕೊರೋನಾ ವೈರಸ್ ಮಾಸ್ಕ್‌ ಮೇಲೆ ಒಂದು ವಾರಗಳ ಕಾಲ ಹಾಗೂ ನೋಟು, ಸ್ಟೀಲ್‌, ಪ್ಲಾಸ್ಟಿಕ್‌ ಮೇಲೆ ಕೆಲದಿನಗಳ ತನಕ ಜೀವಂತವಾಗಿ ಇರಬಹುದು ಎಂದು ಅಧ್ಯಯನವೊಂದು ಹೇಳಿದೆ.

ಹಾಂಗ್‌ಕಾಂಗ್‌ ವಿವಿ ಸಂಶೋಧಕರು ಕೊರೋನಾ ವೈರಸ್ ಕುರಿತು ಅಧ್ಯಯನ ನಡೆಸಿದ್ದಾರೆ.  ಸಾಬೂನು ಮತ್ತು ನೀರಿನಿಂದ ಕೈತೊಳೆಯುವುದರಿಂದ ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಹಾಗಾಗಿ ಮಾಸ್ಕ್ ಗಳನ್ನು ಆಗಿಂದಾಗ್ಗೆ ಡೆಟಾಲ್ ಮುಂತಾದುವುಗಳಿಂದ ತೊಳೆದು ಬಳಸುವುದು ಉತ್ತಮ ಎಂದು ಹೇಳಿದೆ.