ಬೆಂಗಳೂರು: ಕೊರೊನಾ ಪರಿಣಾಮ ದಿಂದ  ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ತೀವ್ರ ನಷ್ಟ ಅನುಭವಿಸಿದ್ದರು. ಹೀಗಾಗಿ ಬಹಳಷ್ಟು ಮಂದಿ ಬೆಳೆಗಳನ್ನು ತಮ್ಮ ಹೊಲದಲ್ಲೇ ನಾಶಪಡಿಸಿದ್ದರು.

ರಾಜ್ಯ ಸರ್ಕಾರ ಮಾವು ಬೆಳೆಗಾರರಿಗೆ ನೆರವಿಗೆ ಬಂದಿದ್ದು, ಆನ್ಲೈನ್ ಮಾರಾಟ ಸಂಸ್ಥೆ ಫ್ಲಿಪ್ಕಾರ್ಟ್ ಜೊತೆ ಮಾವು ಮಂಡಳಿ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಮುಂದಿನ 45 ದಿನಗಳಲ್ಲಿ ಫ್ಲಿಪ್ಕಾರ್ಟ್ ಪ್ರಾಯೋಗಿಕವಾಗಿ ರೈತರ ಮಾವಿನ ಹಣ್ಣನ್ನು ಮಾರಾಟ ಮಾಡಲಿದೆ.

ಗಮನಾರ್ಹ ಸಂಗತಿಯೆಂದರೆ ಬೆಳೆಗಾರರೇ ಇಲ್ಲಿ ಬೆಲೆ ನಿಗದಿಪಡಿಸಲಿದ್ದು, ಮಧ್ಯವರ್ತಿಗಳ ಪಾತ್ರ ಇರುವುದಿಲ್ಲ. ಅಲ್ಲದೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಲ್ಪ್ (ಮಾವಿನ ತಿರುಳು) ಮಾರುಕಟ್ಟೆ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ .