ಚಿತ್ರದುರ್ಗ: ಜಿಲ್ಲಾ ರೇಷ್ಮೆ ಬೆಳೆಗಾರರು ಅಧಿಕ ಮತ್ತು ನಿಶ್ಚಿತ ಲಾಭ ತರುವಂತಹ ರೇಷ್ಮೆ ಕೃಷಿಮಾಡುತ್ತಿದ್ದಾರೆ. ಆದರೆ ೨೦೨೦ ರಲ್ಲಿ ಕೊರೊನ ಖಾಯಿಲೆ ಬಂದಿರುವುದರಿಂದ ೧ ಕೆ.ಜಿ ರೇಷ್ಮೆ ಗೂಡಿಗೆ ೩೫೦ ರೂಪಾಯಿ ಉತ್ಪಾದನಾ ವೆಚ್ಚವಾಗುತ್ತಿದ್ದು ಕೊರೊನ ಬಂದಾಗಿನಿಂದ ೧ ಕೆ.ಜಿ ರೇಷ್ಮೆ ಗೂಡಿನ ಬೆಲೆ ೧೦೦-೨೫೦ ರೂ.ಗಳಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು ಬಹಳ ನಷ್ಟ ಹೊಂದಿ ಬದುಕಲು ಬೇರೆ ದಾರಿಯಿಲ್ಲದೆ ಜಿಲ್ಲೆಯ ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

ಆದುದರಿಂದ ನಾವು ಬೆಳೆದ ರೇಷ್ಮೆ ಗೂಡಿಗೆ ದೇಶದ ಕೃಷಿ ತಜ್ಞ ಡಾ|| ಸ್ವಾಮಿನಾಥನ್ ರವರ ವರದಿಯ ಪ್ರಕಾರ ಗೂಡಿನ ಉತ್ಪಾದನಾ ವೆಚ್ಚ ೩೫೦ ರೂ.ಗಳಿಗೆ ಶೇ ೫೦ ರಷ್ಟು ಲಾಭಾಂಶ ಸೇರಿಸಿ ಕನಿಷ್ಟ ಬೆಂಬಲ ಬೆಲೆಯನ್ನು ಸರ್ಕಾರ ಕೂಡಲೇ ಘೋಷಣೆ ಮಾಡಬೇಕು ಎಂದು ರೈತರು ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ನೇಮಕ ಮಾಡಿದ್ದ ಡಾ|| ಹೆಚ್.ಬಸವರಾಜ್ ಸಮಿತಿಯ ಪ್ರಕಾರ ಅಂದಿನ ವರದಿಯನ್ನು ಇಂದು ಪರಿಷ್ಕರಣೆ ಮಾಡಿ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಕೊರೊನಾ ಬಂದಾಗಿನಿದ್ದು ಗೂಡು ಬೆಳೆದು ನಷ್ಟವಾಗಿರುವ ರೈತರಿಗೆ ಪರಿಸ್ಥಿತಿ ಸುಧಾರಿಸೋವರೆಗೂ ೧ ಕೆ.ಜಿ ಗೂಡಿಗೆ ಕನಿಷ್ಟ ೧೫೦ ರೂಪಾಯಿ ಪ್ರೋತ್ಸಾಹ ಧನವನ್ನು ಕೊಡಬೇಕೆಂದು ಚಿತ್ರದುರ್ಗ ಜಿಲ್ಲೆಯ ರೇಷ್ಮೆ ಬೆಳೆಗಾರರ ಮನವಿ ಪತ್ರದ ಮೂಲಕ ಸರಕಾರಕ್ಕೆ ಒತ್ತಾಯಿಸಿದರು.