ಬೆಂಗಳೂರು: ಪದೇ ಪದೆ ಮಾಧ್ಯಮದವರ ಮೇಲೆ ಮತ್ತೆ ಸಿಎಂ ಕುಮಾರಸ್ವಾಮಿಯವರು ಕಿಡಿಕಾರಿರುವ ಘಟನೆ ನಡೆದಿದೆ. ಮಾದ್ಯಮದವರೇ ರೈತರಿಗೆ ಕುಮ್ಮಕ್ಕು ನೀಡಿ ಪ್ರತಿಭಟನೆ ಮಾಡುವೆಂತೆ ಪ್ರೆರೇಪಿಸುತ್ತಾರೆ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, ಸುಖ ಸುಮ್ಮನೆ ಅವರನ್ನು ಲಾರಿ ಕೆಳಗಿ ಮಲಗಿಸಿ ಕ್ಯಾಮರಾದಲ್ಲಿ ಶೂಟ್ ಮಾಡುತ್ತಾರೆ, ಅದು ಸರಿಯಲ್ಲ. ಹಾಗೂ ನಾವು ಮಾಡುವ ಒಳ್ಳೆಯ ಕೆಲಸಗಳನ್ನು

ಮಾಧ್ಯಮಗಳು ಸೂಕ್ತವಾಗಿ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿಕೊಂಡರು. ಸರ್ಕಾರ 5 ವರ್ಷ ಸುಭದ್ರವಾಗಿರಲಿದ್ದು, ಈ ಬಗ್ಗೆ ಯಾವುದೇ ಆತಂಕ ಬೇಡ ಅಂತ ಹೇಳಿದರು.