ಬೆಂಗಳೂರು: . ಮಾಧ್ಯಮಗಳು ತಮ್ಮನ್ನು ವಿಲನ್ ನನ್ನಾಗಿ ಚಿತ್ರಿಸುತ್ತಿವೆ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಅಸಮದಾನವನ್ನು ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಮ್ಮದು ಜನಪರವಾದ ಸರ್ಕಾರ ಆದರೆ ಮಾಧ್ಯಮಗಳು ಅದನ್ನು ಮುಚ್ಚಿಟ್ಟು ನಕಾರಾತ್ಮಕ ಅಂಶಗಳನ್ನೇ ಜನರ ಮುಂದಿಟ್ಟು ನನ್ನನ್ನು ವಿಲನ್‌ನಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್‌ ಏರಿಕೆ ಬಗ್ಗೆ ಕೇಳಿದ್ದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ ಕುಮಾರಸ್ವಾಮಿ, ‘ಮೋದಿ ಅವರು ಇಂಧನ ಬೆಲೆ 20 ರೂಪಾಯಿ ಏರಿಸಿದಾಗ ಸುಮ್ಮನಿದ್ದಿರಿ, ಗ್ಯಾಸ್ ಬೆಲೆ 300 ಏರಿಸಿದಾಗ ಸುಮ್ಮನಿದ್ದಿರಿ ಏಕೆ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ನಾವು ಅಧಿಕಾರಕ್ಕೆ ಬಂದು  ಇನ್ನೂ 2 ತಿಂಗಳಷ್ಟೆ ಮಾಧ್ಯಮಗಳು ಆತುರದಲ್ಲಿ ಸರ್ಕಾರದ ಬಗ್ಗೆ ವಿಶ್ಲೇಷಣೆಯಲ್ಲಿ ತೊಗಿವೆ ಸರಕಾರದ ಮೇಲೆ ಭರವಸೆ ಇರಲಿ. ನಮ್ಮದು ಅಭಿವೃದ್ಧಿ ಕಾರ್ಯಕ್ರಮ ಎಂದು ಹೇಳಿದರು.