ನವದೆಹಲಿ: ಸುಪ್ರೀಂ ಕೋರ್ಟ್ ದೃಶ್ಯ, ಮುದ್ರಣ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಕೊರೋನಾ ವೈರಸ್ ಹರಡುತ್ತಿರುವ ಈ ವೇಳೆಯಲ್ಲಿ ಉತ್ಕೃಷ್ಟ ಮಟ್ಟದ ಜವಾಬ್ದಾರಿ ಹೊತ್ತು ಮುನ್ನಡೆಯಿರಿ ಎಂದು ಎಚ್ಚರಿಕೆ ನೀಡಿದೆ. ಈ ವೇಳೆ, ಭಯ ಹುಟ್ಟಿಸುವಂತಹ ಸುದ್ದಿಯನ್ನು ಖಚಿತಪಡಿಸಿಕೊಳ್ಳದೆ ಪ್ರಸಾರ ಮಾಡಬೇಡಿ ಎಂದೂ ಸೂಚಿಸಿದೆ.

ಕೊರೋನಾ ವೈರಸ್ ಸದ್ಯ 160ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, ಭಾರತವೂ ಕೂಡ ತುತ್ತಾಗಿದೆ. ಪರಿಣಾಮ ಸುಪ್ರೀಂ ಕೋರ್ಟ್ ಮಾಧ್ಯಮಗಳಿಗೆ ಕಿವಿಮಾತನ್ನು ಹೇಳಿದೆ.