ಬೆಂಗಳೂರು: ಖಾವಿ ಹಾಕಿಕೊಂಡವರು ಇಂತವರಿಗೆ ಪಕ್ಷದ ಟಿಕೆಟ್ ನೀಡಿ ಅಂತ ಪತ್ರಬರೆದವರು ಯಾರು ಅಲ್ಲ ಬಸವ ಧರ್ಮ ಪ್ರತ್ಯೇಕವಾಗ ಬೇಕೆಂದು ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಮಾತೇಮಹಾದೇವಿ.!

ಕಾಂಗ್ರೆಸ್ ಗೆ ಮತ ಹಾಕಿ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೇ ಮಹದೇವಿ ಈಗ ಇನ್ನೊಂದು ವಿವಾದಕ್ಕೆ ಕಾರಣವಾಗಿದ್ದಾರೆ. ಹೌದು, ಬೀದರ್ ನ ಬಸವ ಕಲ್ಯಾಣದಿಂದ ಆನಂದ ದೇವಪ್ಪಗೆ ಟಿಕೇಟ್ ಕೊಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯೋದ್ರ ಮೂಲಕ ಮನವಿ ಮಾಡಿದ್ದಾರೆ.

ಬಸವ ಕಲ್ಯಾಣ ನಮ್ಮ ಧರ್ಮ ಕ್ಷೇತ್ರವಾಗಿದ್ದು, ಇಲ್ಲಿ ಬಸವ ತತ್ವ ನಿಷ್ಠೆಯ ಲಿಂಗಾಯಿತರು ಶಾಸಕರಾಗಿ ಇರಬೇಕು ಎಂಬುದು ನಮ್ಮ ಆಪೇಕ್ಷೆಯಾಗಿದೆ ಅಂತ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಏನು ಬಂತಪ್ಪ ಟಿಕಟ್ ವಿಷಯ ಖಾವಿಗಳು ಇಂತವರಿಗೆ ಟಿಕೆಟ್ ನೀಡಿ ಅಂತ ಹೇಳಿದ್ರು ಮತದಾರರೇನು ಮುರ್ಖರೆ ಅಥವ ಪಕ್ಷದವರೇನು ದಡ್ಡರೆ.?