ಚಿತ್ರದುರ್ಗ.: ಭಾರತ ದೇಶದಲ್ಲಿ ಮಹಿಳೆಯರಿಗೆ ಸರಿಯಾದ ರಕ್ಷಣೆಯಿಲ್ಲ ಅದ್ದರಿಂದ ಮಹಿಳೆಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಯತ್ತಿರುವುದು. ಇದರ ವಿರುದ್ದವಾಗಿ ಮಹಿಳೆಯರು ಆತ್ಮ ರಕ್ಷಣೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ, ಸಮಾಜದಲ್ಲಿ ಪ್ರತಿಯೊಬ್ಬ ಪ್ರಜೆಯು ಮಹಿಳೆಯರಿಗೆ ಮಾತೃ ಭಾವನೆಯಿಂದ ಪೂಜ್ಯ ಸ್ಥಾನ ನೀಡಿ ಗೌರವಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಶಿ ತಿಳಿಸಿದರು.

ಐ.ಎಂ.ಎ. ಹಾಲ್‌ನಲ್ಲಿ ಇನ್ನರ್‌ವೀಲ್, ಚಿತ್ರದುರ್ಗ ಫೋರ್ಟ್, ರೋಟರಿ ಕ್ಲಬ್ ಹಾಗೂ ಜಿಲ್ಲಾ ಪೊಲೀಸ್ ಓಬವ್ವ ಪಡೆ ಮತ್ತು ಮಹಿಳಾ ಕಾಲೇಜ್, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆತ್ಮರಕ್ಷಣೆ ಮತ್ತು ಮಕ್ಕಳ ಹಾಗೂ ಮಹಿಳೆಯರ ಲೈಂಗಿಕ ದೌರ್ಜನ್ಯದ ಬಗ್ಗೆ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ಪ್ರತ್ಯೇಕವಾದ ಓಬವ್ವ ಪಡೆಯನ್ನು ರಚಿಸಲಾಗಿದ್ದು, ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಹಾಗೂ ಮಹಿಳಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಲ್ಲಿಸಲು ಇಂತಹ ಪಡೆಯು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ, ಕೊಲೆಗಳು ನಡೆಯುತ್ತಿವೆ ಎಂದು ವರ್ತಮಾನ ದಿನಪತ್ರಿಕೆಗಳಲ್ಲಿ ನೋಡಿ ತಿಳಿದುಕೊಳ್ಳುತ್ತೇವೆ. ಇದೆಲ್ಲ ನೋಡಿದಾಗ ಭಾರತ ದೇಶದಲ್ಲಿ ಮಹಿಳೆಯರಿಗೆ ಇನ್ನೂ ಸರಿಯಾಗಿ ರಕ್ಷಣೆ ಸಿಗದಿರುವುದು ವಿಷಾದನೀಯವೆಂದರು.

ಡಿ.ವೈ.ಎಸ್.ಪಿ. ಸಂತೋಷ್, ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಲಕ್ಷ್ಮಣ ಅರೆಸಿದ್ದಿ, ರೋಟರಿ ಫೋರ್ಟ್ ಕ್ಲಬ್ ಅಧ್ಯಕ್ಷ ಮಂಜುನಾಥ್, ಇನ್ನರ್‌ವೀಲ್ ಕ್ಲಬ್ ಕಾರ್ಯದರ್ಶಿ ಶೈಲಜ ಲಕ್ಷ್ಮೀನಾರಾಯಣ, ಫೋರ್ಟ್ ಕ್ಲಬ್‌ನ ರೇಖಾಸಂತೋಷ್, ಪಿ.ಎಸ್.ಐ. ಬಸವರಾಜ್ ಹಾಗೂ ಓಬವ್ವ ಪಡೆಯ ಸಿಬ್ಬಂದಿ ಮತ್ತು ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಪ್ರಥಮದರ್ಜೆ ಕಾಲೇಜಿನ ಕಾಮರ್ಸ್ ವಿಭಾಗದ ಉಪನ್ಯಾಸಕ ಡಾ: ಚನ್ನಕೇಶವ ಸರ್ವರನ್ನು ಸ್ವಾಗತಿಸಿದರು.