ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ ಆಗಸ್ಟ್ 04 ರಂದು 18.2 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.

ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 17.4 ಮಿ.ಮೀ. ಮಳೆ,  ಬಾಗೂರು 08, ಮತ್ತೋಡು 12, ಶ್ರೀರಾಂಪುರ 10.2, ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 4.4, ರಾಮಗಿರಿ 04, ಚಿಕ್ಕಜಾಜೂರು 10.2, ಬಿ.ದುರ್ಗ 08, ಹೆಚ್.ಡಿ ಪುರ 5.2, ತಾಳ್ಯ 4.2, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ -01 ರಲ್ಲಿ 13.6, ಚಿತ್ರದುರ್ಗ-02ರಲ್ಲಿ 5.6, ಹಿರೇಗುಂಟನೂರು 2.1, ಭರಮಸಾಗರ 14, ಸಿರಿಗೆರೆ 9.6, ಐನಹಳ್ಳಿ 3.8, ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮೂರು 2.2, ರಾಯಾಪುರ 2.2, ರಾಂಪುರ 12.1, ದೇವಸಮುದ್ರ 7.2, ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಪರುಶುರಾಂಪುರ 1.6, ದೇವರಮರಿಕುಂಟೆ 3.2, ನಾಯಕನಹಟ್ಟಿ 6.2, ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 2.4, ಬಬ್ಬೂರು 2, ಸುಗೂರು 4.3, ಇಕ್ಕನೂರು 4.2, ಈಶ್ವರಗೆರೆ ಯಲ್ಲಿ 2.4 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.