ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆಗೆ ಡಿಸಿ 80ರಿಂದ 90 ಜನ ಭಾಗಿಯಾಗಲು ಅನುಮತಿ ನೀಡಿದ್ದ ಹಿನ್ನೆಲೆ ಹೈಕೋರ್ಟ್ ವಿಭಾಗೀಯ ಪೀಠವು ಇಂದು ಕಳವಳ ವ್ಯಕ್ತಪಡಿಸಿದೆ.

ಮದುವೆಗೆ ಎಷ್ಟು ವಾಹನಗಳು ಆಗಮಿಸಿದ್ದವು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ವಿಚಾರಣೆ ವೇಳೆ, ಲಾಕ್ ಡೌನ್ ಹೇರಿದ್ದಾಗ ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಯಾವುದೇ ಸಮಾರಂಭ ನಡೆಸಲು ಅನುಮತಿ ನೀಡಿರಲಿಲ್ಲ. ಹೀಗಿರುವಾಗ ಡಿಸಿ ಅನುಮತಿ ನೀಡಿದ್ದು ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದೆ.!