ಬೆಂಗಳೂರು; ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್‌ ಮುಖರ್ಜಿ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಭಾರತ ರತ್ನ’ ಪ್ರಣವ್ ಅಗಲಿಕೆಯಿಂದ ಭಾರತ ಅಮೂಲ್ಯವಾದ ‘ರತ್ನ’ ಕಳೆದುಕೊಂಡಂತಾಗಿದೆ. ಮಾಜಿ ರಾಷ್ಟ್ರಪತಿ ಪ್ರಣಬ್‌ ನಿಧನರಾದ ಸುದ್ದಿ ಅಪಾರವಾದ ನೋವನ್ನುಂಟು ಮಾಡಿದೆ. ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಿ ರಾಷ್ಟ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಪ್ರಣಬ್ ದಾದಾರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.