ದಾವಣಗೆರೆ : ಸಿದ್ದರಾಮಯ್ಯರಿಗೆ ಸಚಿವ ಸಂಪುಟದ ಮೇಲೆ ಹಿಡತ ತಪ್ಪಿದ್ದರಿಂದ ಮಾಜಿ ಮುಖ್ಯ ಮಂತ್ರಿ ಆದರೂ ಇಲ್ಲದಿದ್ರೆ ಅವರೇ ಮುಖ್ಯ ಮಂತ್ರಿಗಳಾಗಿರುತ್ತಿದ್ದರು ಅಂತ ಶಾಮನೂರು ಶಿವಶಂಕರಪ್ಪ ಹೇಳಿದರು.

ದಾವಣಗೆರೆಯಲ್ಲಿ ನಡೆದ ಕುರುಬ ಸಮುದಾಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಂತ್ರಿ ಮಂಡಲದ ಮೇಲೆ ಹಿಡಿತ ಹೊಂದಿರಲಿಲ್ಲ. ಈ ಕಾರಣಕ್ಕಾಗಿಯೇ ಅವರು ಮತ್ತೆ ಸಿಎಂ ಆಗಲಿಲ್ಲ ಎಂದರು.

ಕುರುಬ ಸಮಾಜದ ಜನ ಒಗ್ಗಟ್ಟಿನಿಂದ ಮತ ಚಲಾಯಿಸಲಿಲ್ಲ. ಕೆಲವರು ಮತ ಚಲಾಯಿಸಿದರು, ಇನ್ನೂ ಕೆಲವರು ಕೈಕೊಟ್ಟರು, ಸಿದ್ದರಾಮಯ್ಯ ಸಿಎಂ ಆಗದಿರಲೂ ಇದು ಒಂದು ಕಾರಣ ಎಂದು ಹೇಳಿದ ಶಾಮನೂರು ಮುಂದೆ ಅವರನ್ನು ಮುಖ್ಯ ಮಂತ್ರಿ ಆಗಿ ಮಾಡೋಣ ಅಂತ ಹೇಳುವುದನ್ನು ಮರೆಯಲಿಲ್ಲ.