ಚಿತ್ರದುರ್ಗ: ಆತನಿಗೆ ತಿಳುವಳಿಕೆ, ಜ್ಞಾನ ಇದ್ರೆ ಹೊಸ ಯೋಜನೆ ತರಲಿ. ಅದು ಬಿಟ್ಟು ಬಡವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಡೆಹಿಡಿಯುವುದಲ್ಲ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪರ ಮೇಲೆ ಮಾಜಿ ಮಂತ್ರಿ ಹೆಚ್. ಆಂಜನೇಯರು ಅಸಮದಾನ ವ್ಯಕ್ತಪಡಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ತಲೆಯಲ್ಲಿ ಜ್ಞಾನ ಇಲ್ಲದ ಶಾಸಕ. ಅನಗತ್ಯವಾಗಿ ನಾನು‌ ಮಂಜೂರು ಮಾಡಿದ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿದ್ದಾನೆ. ನಾನು ಅಧಿಕಾರದಲ್ಲಿದ್ದಾಗ ಅವರ ಯಾವ ಯೋಜನೆಗಳನ್ನು ತಡೆ ಹಿಡಿದಿರಲಿಲ್ಲ ಎಂದರು.

ತಿಂಗಳಿಂದ ಏನು ಮಾಡುತ್ತಾರೆ ನೋಡೋಣ‌ ಅಂತಾ ಬಾಯಿ ಮುಚ್ಚಿ ಕುಳಿತಿದ್ದೆ. ಈಗಿನ ಅವಧಿಯಲ್ಲಿ ಒಂದು ಪೈಸೆ ಗ್ರಾಂಟ್ ಬಂದಿಲ್ಲ. ಸುಖಾಸುಮ್ಮನೆ ಅದನ್ನು ತಂದೆ, ಇದನ್ನು ತಂದೆ ಎನ್ನುತ್ತಿದ್ದಾರೆ.

ನನ್ನ ಅವಧಿಯಲ್ಲಿ ಮಂಜೂರಾದ ಯೋಜನೆ, ಟೆಂಡರ್ ಮುಂದುವರೆಯಬೇಕು. ತಡೆಹಿಡಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.

ಜನಾದೇಶದಲ್ಲಿ ನಾವು ಸೋತಿದ್ದೇವೆ. ಅದಕ್ಕೆ ತಲೆಬಾಗುತ್ತೇವೆ. ಆದ್ರೆ ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ ಎಂದರು.