ಚಿತ್ರದುರ್ಗ: ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೂ ವಿವಾದತ್ಮಕ ಹೇಳಿಕೆಗಳಿಗೂ ಒಂಥಾರ ನಂಟು ಅನ್ನಿಸುತ್ತದೆ, ತಮ್ಮ ಹಾವ, ಭಾವ, ಮಾತಿನ ವರಸೆಯಿಂದ ಸುದ್ದಿ ಮಾಡುವ ಹೆಚ್. ಆಂಜನೇಯ, ಈಗ ತಮ್ಮದೇ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಹೊಳಲ್ಕೆರೆ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಆಂಜನೇಯ ಅವರು ಮಾತನಾಡಿರುವ ಒಂದು ಮಾತು ಈಗ ವಿವಾದಕ್ಕೆ ಕಾರಣವಾಗಿದೆ.

ಹಿಂದಿನ ಕಾಂಗ್ರೆಸ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ವೇಳೆಯಲ್ಲಿ ಮಾದಿಗ ಸಮುದಾಯದ ಬಹುನಿರೀಕ್ಷಿತ  ನ್ಯಾ, ಮೂರ್ತಿ ಸದಾಶಿವ ಆಯೋಗಕ್ಕೆ ಸಂಬಂಧಪಟ್ಟಂತೆ ಶಿಫಾರಸು ಮಾಡಲು ನಮ್ಮ ಸರ್ಕಾರ ಸಿದ್ದ ಅನ್ನೋ ಹೇಳಿಕೆ ನೀಡಿ ನೀಡಿ ಕೊನೆಗೆ ಅಧಿಕಾರವನ್ನು ಕಳೆದುಕೊಂಡು ಈಗ ಮನೆ ಸೇರಿದ್ದಾರೆ.

ಈ ನಡುವೆ ಅವರು ಕೊಪ್ಪಳದಲ್ಲಿ ನಡೆದ ಪೊ.ಬಿ. ಕೃಷ್ಣಪ್ಪ ಅವರ 80ನೇ ಜನ್ಮದಿನದ ಪ್ರಯುಕ್ತ ತಾಲೂಕು ಕ್ರೀಡಾಂಗಣದಲ್ಲಿ ನಡೆದ ವಿಮುಕ್ತ ದೇವದಾಸಿಯರ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ

ಕಾರ್ಯಕ್ರಮದಲ್ಲಿ ಮಾತನಾಡಿ, ಸದಾಶಿವ ಆಯೋಗದ ವರದಿ ಜಾರಿಯಿಂದ ಸಮುದಾಯದಕ್ಕೆ (ಮಾದಿಗ ಸಮುದಾಯಕ್ಕೆ) ಯಾವುದೇ ರೀತಿಯ ಉಪಯೋಗಿವಲ್ಲ. ಸಮುದಾಯಕ್ಕಾಗಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಆದಿಜಾಂಬವ ಅಭಿವೃದ್ದಿ ಮಂಡಳಿಯನ್ನು ಜಾರಿಗೆ ತರಲು ಮುಂದಾಗಿತ್ತು, ಈಗ ಅದು ಈ ಸರ್ಕಾರದಲ್ಲಿ ಅಸ್ವಿತ್ತವಕ್ಕೆ ಬರಲಿದೆ, ಆ ಮೂಲಕ ಸಮುದಾಯದವರು ಅದರ ಪ್ರಯೋಜನ ಪಡೆದುಕೊಳ್ಳಬೇಕು ಅಂತ ಹೇಳಿದ್ದಾರೆ.

ಇನ್ನು ಮಾಜಿ ಸಚಿವ ಹೆಚ್. ಆಂಜನೇಯ ಅವರ ವಿವಾದತ್ಮಕ ಹೇಳಿಕೆಯಿಂದ ತಮ್ಮದೇ ಸಮುದಾಯದ ಒಳಮೀಸಲಾತಿ ಹೋರಾಟಗಾರು ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರು ಪ್ರಾರಂಭದಲ್ಲಿ ಒಳಮೀಸಲಾತಿ ಜಾರಿಗೆ ತರುವ ಬಗ್ಗೆ ಮಾತು ನೀಡಿದ್ದರು, ಆದರೆ ಈಗ ರಾಜಕೀಯ ಉದ್ದೇಶಕ್ಕಾಗಿ ಹೀಗೆ ಹೇಳಿಕೆ ನೀಡುವುದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನೆ ಮಾಡಿದ ಹಾಗೇ ಆಗುತ್ತದೆ. ಹೀಗಾಗಿ ಕೂಡಲೇ ಹೆಚ್. ಆಂಜನೇಯ ಅವರು ತಮ್ಮ ಹೇಳಿಕೆಯನ್ನು ವಾಪಸ್ಸು ತೆಗೆದುಕೊಳ್ಳಬೇಕು, ಸಮುದಾಯದ ಉದ್ದೇಶಕ್ಕಾಗಿ ರಚನೆಯಾಗುತ್ತಿರುವ ಮಂಡಳಿಯಿಂದ ಲಾಭವಾದ್ರೂ ಶೈಕ್ಷಣಿಕ, ಸಾಮಾಜಿಕ, ಉದ್ಯೋಗಕ್ಕೆ ಸಂಬಂಧಪಟ್ಟಂತೆ ಮಾದಿಗ ಸಮುದಾಯಕ್ಕೆ ಲಾಭವಾಗಬೇಕಾದ್ರೆ ಒಳಮೀಸಲಾತಿ ಜಾರಿಯಾಗಲೇ ಬೇಕು ಅಂತ ಸಮಾಜದ ಹೋರಾಟಗಾರರು ಮನವಿ ಮಾಡಿಕೊಂಡಿದ್ದಾರೆ.

ಸಮಾಜದ ಹೆಸರನ್ನು ಒಳಕೆ ಮಾಡಿಕೊಂಡು ಈಗ ಸಮಾಜದ ವಿರುದ್ದ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಅವರ ಸೋಲಿಗೆ ಮಾದಿಗ ಸಮುದಾಯ ಕಾರಣವಲ್ಲ, ಸ್ವತಃ ಅವರೇ ಮಾಡಿಕೊಂಡಿರುವ ಯಡವಟ್ಟು ಕಾರಣ ಎನ್ನುವುದನ್ನು ಮನಗಾಣಬೇಕು ಅದನ್ನು ಬಿಟ್ಟು ಜಾತಿಯಲ್ಲಿ ಒಡಕು ಮೂಡಿಸುವ ಕೆಲಸಕ್ಕೆ ಮುಂದಾಗಬಾರುದ ಅಂತ ಒಳಮೀಸಲಾತಿ ಹೋರಾಟಗಾರರು ಹೇಳಿದ್ದಾರೆ.