ಬೆಂಗಳೂರು: ಮಾಜಿ ಡಿಸಿಎಂ ಮನೆ ಮೇಲಿನ ಐಟಿ ದಾಳಿ ಅಂತ್ಯವಾಗಿದ್ದು, ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ಮಾಜಿ ಡಿಸಿಎಂ ಪರಮೇಶ್ವರ್ ಮನೆ​ ಮೇಲಿನ ಐಟಿ ದಾಳಿ ಇಂದು ಮುಕ್ತಾಯವಾಗಿದ್ದು, ಸಿಕ್ಕ ದಾಖಲೆಗಳ ಬಗ್ಗೆ ಪರಮೇಶ್ವರ್​ ಮನೆಯಲ್ಲಿಯೇ ವಿಚಾರಣೆ ನಡೆಸಿದ್ದರು ಎಂದು ತಿಳಿದುಬಂದಿದೆ.

ಹಾಗಾಗಿ ಅವರ​ ಮನೆಯಲ್ಲಿಯೇ ಐಟಿ ಅಧಿಕಾರಿಗಳು ವಾಸ್ತವ್ಯ ಹೂಡಿದ್ದರು. 15 ಜನ ಐಟಿ ಅಧಿಕಾರಿಗಳು 15 ಗಂಟೆಗಳ ಕಾಲ ನಿನ್ನೆ ಪರೀಶೀಲನೆ ನಡೆಸಿದ್ದರು. ಅಧಿಕಾರಿಗಳಿಗೆ 8.82 ಕೋಟಿ ರೂ. ಮೌಲ್ಯದ ಅಘೋಷಿತ ಆಸ್ತಿ ಸಿಕ್ಕಿದೆ ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ, ಪರಮೇಶ್ವರ್ ಅವರಿಗೆ ಎರಡು ದಿನ ಬಿಟ್ಟು ಐಟಿ ಕಚೇರಿಗೆ ವಿಚಾರಣೆಗೆ ಬರುವಂತೆ​ ಸೂಚಿಸಿದ್ದಾರಂತೆ.