ಬೆಂಗಳೂರು: ಸಿನಿಮಾ ಶೂಟಿಂಗ್ ಗೆ ಎಂದು ಕರೆದುಕೊಂಡು ಹೋದ ಮಹಿಳೆಗೆ ಊಟದಲ್ಲಿ ಮತ್ತುಬರುವ ಔಷಧಿ ಹಾಕಿ ನಂತರ ಆಕೆಯ ಅಶ್ಲೀಲ ವಿಡಿಯೋ ಮಾಡಿ ಹಣ ಬೇಡಿಕೆ ಇಟ್ಟಿದ್ದರು ಎಂದು ಮಹಿಳೆ ಒಬ್ಬರು ನಟ ಧರ್ಮನ ಮೇಲೆ  ಆರೋಪಮಾಡಿದ್ದಾರೆ.

ನಟ ಧರ್ಮ ಹಲವಾರು ಕನ್ನಡ ಚಿತ್ರಗಳಲ್ಲಿ ಖಳನಾಯಕನ ಪಾತ್ರಮಾಡಿದ್ದಾರೆ. ಇವರ ಮೇಲೆ ಮಹಿಳೆಯೊಬ್ಬರು ಅಶ್ಲೀಲ ವಿಡಿಯೋ ಮಾಡಿ ಹಣಕ್ಕೆ ಪೀಡಿಸುತ್ತಿದ್ದಾನೆ. ಈಗಾಗಲೆ 16 ಲಕ್ಷಗಳನ್ನು ಪಡೆದು ಪದೇ ಪದೇ ಹಣ ಕೇಳುತ್ತಿದ್ದಾನೆ ಎಂದು ಬಾಗೂರು ಠಾಣೆಯಲ್ಲಿ ಮಹಿಳೆ ಕೇಸ್ ದಾಖಲಿಸಿದ್ದಾಳೆ.  ಪೊಲೀಸರು ಆರೋಪಿ ಧರ್ಮನ್ನು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ.