ಚಿತ್ರದುರ್ಗ: ಜನತೆಗೆ ಶುಚಿ ಮತ್ತು ರುಚಿಯಾದ ಆಹಾರವನ್ನು ನೀಡುವುದರ ಮೂಲಕ ಜನ ಮನ್ನಣೆಯನ್ನು ಗಳಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್ ಸ್ವ ಸಹಾಯ ಸಂಘದ ಮಹಿಳೆಯರಿಗೆ ಕಿವಿ ಮಾತು ಹೇಳಿದರು.
ಚಿತ್ರದುರ್ಗ ನಗರದ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಆವರಣದಲ್ಲಿ ಸೋಮವಾರ ಆರಂಭವಾದ ಸವಿರುಚಿ ಸಂಚಾರಿ ಕ್ಯಾಂಟೀನ್‍ಗೆ ಚಾಲನೆ ನೀಡುವವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ಸಂಘಟಿತರಾಗಿ ಸರ್ಕಾರದ ಸಹಾಯದೊಂದಿಗೆ ಕ್ಯಾಂಟೀನ್ ಪ್ರಾರಂಭ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ಇದರ ಮೂಲಕವಾಗಿಯಾದರೂ ಮಹಿಳೆಯರು ಆರ್ಥಿಕವಾಗಿ ಸಬಲತೆಯನ್ನು ಹೊಂದಬೇಕಿದೆ ಎಂದರು.
ಇಂದಿನ ದಿನಮಾನದಲ್ಲಿ ಹೊರಗಡೆ ತಿಂಡಿ, ಉಟ ಮಾಡುವುದು ಅನಿವಾರ್ಯವಾಗಿದೆ ಮನೆಯಲ್ಲಿ ಗಂಡ ಹೆಂಡತಿ ದುಡಿಯುವುದರಿಂದ ಇಂತಹ ಕ್ಯಾಂಟೀನ್‍ಗಳಿಗೆ ಅವಕಾಶ ಆಗಲಿದೆ ಇದರಿಂದ ಇಲ್ಲಿಗೆ ಬರುವ ಜನತೆಗೆ ಶುಚಿಯಾದ ಆಹಾರವನ್ನು ನೀಡುವುದರ ಮೂಲಕ ಅವರ ವಿಶ್ವಾಸಗಳಿಸಿ ಎಂದು ಸೌಭಾಗ್ಯ ಕಿವಿ ಮಾತು ಹೇಳಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕ್ಯಾಂಟೀನ್‍ಗೆ ಚಾಲನೆ ನೀಡಿದರು.
ಸ್ವಸಹಾಯ ಸಂಘದ ಒಕ್ಕೂಟ ಪದಾಧಿಕಾರಿಗಳಾದ ಕೊಲ್ಲಿಲಕ್ಷ್ಮಿ ವಿವರಿಸಿದರು. ಪ್ರತಿ ದಿನ ನಗರದ ಕೋಟೆ, ಖಾಸಗಿ ಬಸ್ ನಿಲ್ದಾಣ, ವಿಜ್ಞಾನ ಕಾಲೇಜು ಬಳಿ, ಜಿಲ್ಲಾ ಖಜಾನೆ ಮುಂಭಾಗ, ಸ್ಟೀಡಿಯಂ ಬಳಿ, ಸಂತೇಪೇಟೆ ವೃತ್ತ ಹಾಗೂ ರಜಾ ದಿನಗಳಂದು ಪ್ರವಾಸಿ ಸ್ಥಳಗಳಲ್ಲಿ ಮಾರಾಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿ,

ಸವಿರುಚಿ ಮೆನುಟ

ಬೆಳಿಗ್ಗೆ ಇಡ್ಲಿ ವಡೆ, ದೋಸೆ, ಪಡ್ಡು, ರೈಸ್‍ಬಾತ್, ಚೌಚೌಬಾತ್ ,ಮಧ್ಯಾಹ್ನ ಊಟಕ್ಕೆ ಚಪಾತಿ, ಪೂರಿ, ರೊಟ್ಟಿ, 2 ತರಹದ ಪಲ್ಯ, ಅನ್ನ, ಸಂಬಾರ್, ಮುದ್ದೆ ಬಸ್ಸಾರು ಆಂಧ್ರ ಪಪ್ಪ್ ನೀಡಲಾಗುತ್ತದೆ.
ಸಂಜೆ ಮಂಡಕ್ಕಿ, ಮೆಣಸಿಕ ಕಾಯಿ, ಅಂಬೋಡೆ, ಉದ್ದಿನ ವಡೆ, ಅಲಸಂದೆ ವಡೆ, ಅಲೊಬೊಂಡ ಮಸೂರು ವಡೆ ಗೋಬಿ ಮಂಚೂರಿ ರಾತ್ರಿ ಸಮಯದಲ್ಲಿ ಬಿರಿಯಾನಿ, ಕಬಾಬ್, ಎಗ್ ರೈಸ್, ಚಿಕನ್, ಫ್ರೈ, ಚಿಕನ್ ಮಸಾಲ ಮಟನ್ ಮಸಾಲ ಬೋಟಿ ಫ್ರೈಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜಾನಾಯ್ಕ, ವಿಕಲ ಚೇತನ ಕಲ್ಯಾಣ ಇಲಾಖೆ ಆಧಿಕಾರಿ ವೈಶಾಲಿ ಸೇರಿದಂತೆ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.