ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿ ತಮ್ಮ ಜೀವವನ್ನು ಮುಡುಪಾಗಿಟ್ಟು ಸೇವೆ ಸಲ್ಲಿಸಿದ ಮಹಿಳಾ ಕೊರೋನಾ ಯೋಧರಿಗೆ 2 ಸೀರೆಗಳನ್ನು ದೀಪಾವಳಿಯ ಉಡುಗೊರೆಯಾಗಿ ನೀಡಲು ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೈಮಗ್ಗ ನೇಕಾರರು ಹಾಗೂ ಪವರ್‌ಲೂಮ್ ನೇಕಾರರಿಗೆ ನೆರವು ನೀಡಲು ಸರ್ಕಾರ ನಿರ್ಧರಿಸಿದ್ದು, ನೇಯ್ದ ಸೀರೆಗಳನ್ನು ಖರೀದಿಸಿ ವಿವಿಧ ಇಲಾಖೆಗಳ ಮಹಿಳಾ ಕೊರೋನಾ ವಾರಿಯರ್ಸ್‌ಗೆ ಉಚಿತವಾಗಿ ನೀಡಲು ಸಿಎಂ ಸೂಚಿಸಿದ್ದಾರೆ.!

( ಸಾಂದರ್ಭಿಕ ಚಿತ್ರ)