ದಾವಣಗೆರೆ : ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ಶ್ರೀ ನಿವಾಸ ಅಲಿಯಾಸ್ ಮೋಟ್ ಬಳ್ ಸೀನನ್ನು ಪೊಲೀಸರು ಬಂಧಿಸಿ ರಸ್ತೆಯುದ್ಧಕ್ಕೂ ಮೆರವಣಿಗೆ ಮಾಡಿದ ಘಟನೆ ನಡೆದಿದೆ.

ನಿನ್ನೆ ಮತದಾನ ಕೇಂದ್ರದ ಬಳಿ ಬಿಜೆಪಿ ಮುಖಂಡ ಲಕ್ಷ್ಮಣ ಎಂಬುವರ ಮೇಲೆ ಹಲ್ಲೆಗೆ ಯತ್ನ ಆರೋಪ ಮೇಲೆ ಶ್ರೀನಿವಾಸ್ ಹಲ್ಲೆ ಮಾಡಿದ್ದ. ಈ ಸಂಬಂಧ ಮಾಜಿ ಸಚಿವ ರವೀಂದ್ರನಾಥ್ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಪೋರೇಟರ್ ಶ್ರೀನಿವಾಸ್ ನನ್ನು ಬಂಧಿಸಿ ಕೈಕಟ್ಟಿ ಕಾಲರ್ ಹಿಡಿದು ರಸ್ತೆಯಲ್ಲಿ ಮೆರವಣಿಗೆ ಮಾಡಿದರು.