ಚಾಮರಾಜನಗರ: ಲಡ್ಡು ತಯಾರಿಕಾ ವೆಚ್ಚ ಏರಿಕೆಯಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಲಡ್ಡುಗಳ ಮಾರಾಟ ದರದಲ್ಲಿ ಏರಿಕೆ ಮಾಡಲಾಗಿದೆ.100 ಗ್ರಾಂ ತೂಕದ ಲಡ್ಡುಗೆ ಇಂದಿನಿಂದ 25 ರೂಪಾಯಿ ದರ ನಿಗದಿ ಮಾಡಿದ್ದು, ಈ ಹಿಂದೆ 100 ಗ್ರಾಂ ಲಡ್ಡುಬೆಲೆ 20 ರೂ. ಇತ್ತು. ಲಡ್ಡು ತಯಾರಿಕಾ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ 5 ರೂಪಾಯಿ ಏರಿಕೆ ಮಾಡಲಾಗಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಆದಾಯ ತಂದು ಕೊಡುವ ದೇವಾಲಯಗಳ ಪೈಕಿ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಎರಡನೇ ಸ್ಥಾನದಲ್ಲಿದೆ.
ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಮಾದಪ್ಪನ ಸನ್ನಿಧಿಯಲ್ಲಿ ಸಿಗುವ ಲಾಡುಗಳ ದರವನ್ನು 2015 ರಿಂದಲೂ ಏರಿಕೆ ಮಾಡಿರಲಿಲ್ಲ. ಲಡ್ಡು ತಯಾರಿಕೆಯ ಕಚ್ಚಾ ವಸ್ತು ಬೆಲೆ ಏರಿಕೆ, ನೌಕರರ ಸಂಬಳ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
‘ಮಲೆ ಮಹದೇಶ್ವರ ಬೆಟ್ಟದ ಲಡ್ಡುಗಳ ಮಾರಾಟ ದರದಲ್ಲಿ ಬೆಲೆ ಏರಿಕೆ…’

No comments!
There are no comments yet, but you can be first to comment this article.