ಬೆ0ಗಳೂರು; ಮನೆಯ ಕೆಲಸದವನ ಜೊತೆ ಸೇರಿ ಮುದ್ದಿನ ಮಡದಿಯೇ ಗಂಡನನ್ನು ಕೊಲೆ ಮಾಡಿರುವ ವಿಚಿತ್ರ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ ಈ ಪ್ರಕರಣವನ್ನು ತಡವಾಗಿ ಭೇದಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬ0ಧಿತ ಆರೋಪಿಗಳನ್ನು ಬೆಂಗಳೂರು ಉತ್ತರದ ತೋಟದ ಗುಡ್ಡದಹಳ್ಳಿ ನಿವಾಸಿ ಶಿವಲಿಂಗಯ್ಯ ಎಂಬವರ ಪತ್ನಿ ಶೋಭಾ ಹಾಗೂ ಕೆಲಸದಾಳು ರಾಮ ಎಂದು ಗುರುತಿಸಲಾಗಿದೆ. ಆರೋಪಿಗಳು ಅಕ್ರಮ ಸಂಬAಧ ಹೊಂದಿದ್ದು, ಜೂನ್ 1 ರಂದು ಶಿವಲಿಂಗಯ್ಯನನ್ನು ಕೊಲೆ ಮಾಡಿ ಮೃತದೇಹವನ್ನು ಕಸದ ರಾಶಿಯಲ್ಲಿ ಹೂತ್ತಿಟ್ಟಿದ್ದರು. ಶಿವಲಿಂಗಯ್ಯ ಕಾಣದ್ದನ್ನು ಗಮನಿಸಿದ ಆತನ ಸಹೋದರ ನವೆಂಬರ್‌ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.