ಬೆಂಗಳೂರು: ಇಂದು ಎಲೆಕ್ಟ್ರಾನಿಕ್  ಮಾಧ್ಯಮಗಳಲ್ಲಿ ಸುದ್ದಿ ಏನಪ್ಪ ಅಂದ್ರೆ ರಾಹುಲ್ ಗಾಂಧಿಯವರು ಮಾಂಸತಿಂದು ದೇವಸ್ಥಾನಕ್ಕೆ ಹೊಗಿದ್ದಾರೆ. ಎಂದು ಯಡಿಯೂರಪ್ಪ ಬೊಬ್ಬೆಹಾಕುತ್ತಿದ್ದಾರೆ ಇದರ ಬಗ್ಗೆ ನೀಮ್ಮ ಪ್ರತಿಕ್ರಿಯೆ ಏನು ಅಂತ ಮಾಧ್ಯಮದವರು ಜೆಡಿಎಸ್ ನಾಯಕ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಪ್ರಶ್ನೆ ಮಾಡಿದಾಗ, ಅವರ ಉತ್ತರ ಹೀಗಿತ್ತು.

ಕೆಲವು ದೇವರಿಗೆ ಮಾಂಸಾಹಾರವೇ ಪ್ರಿಯ. ಮನಸ್ಸು ಶುದ್ಧವಿಲ್ಲದೆ ದೇವಸ್ಥಾನಕ್ಕೆ ಹೋಗಿ ಏನು ಪ್ರಯೋಜನ? ಎಂದರು. ಈ ಬಗ್ಗೆ ನಾನು ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ನಮ್ಮ ದೇಹವೇ ಒಂದು ಮಾಂಸದ ಮುದ್ದೆ. ಹಾಗಾಗಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು ಎಂದು ಹೇಳಿದ್ದಾರೆ.