ಚಿತ್ರದುರ್ಗ: ಎಸ್.ಡಿ.ಎಂ.ಸಿ ಸದಸ್ಯ ಹಾಗೂ ಸಹ ಶಿಕ್ಷಕರ ಕಿರುಕುಳದ ಆರೋಪ, ಮನನೊಂದ ಪ್ರೌಢಶಾಲಾ ಶಿಕ್ಷಕಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ರಾಂಪುರದ ಅಕ್ಕಮಹಾದೇವಿ ಬಡಾವಣೆಯಲ್ಲಿ  ದೇವಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯಶಿಕ್ಷಕಿ ತಿಪ್ಪೀರಮ್ಮ(46) ನೇಣಿಗೆ ಶರಣಾದ ದುರ್ದೈವಿ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳ ಶೂ ಖರೀದಿಯಲ್ಲಿ ಅವ್ಯವಹಾರ ಎಸಗಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿದ ಹಿನ್ನೆಲೆಯಲ್ಲಿ, ಅವಮಾನ ತಾಳಲಾರದೆ ಆತ್ಮಹತ್ಯೆಗೆ ಮುಂದಾಗಿದ್ದಾರೆ.

 ಈ ಬಗ್ಗೆ ಆಪ್ತ ಸಹೋದ್ಯೋಗಿಗಳು ಹಾಗೂ ಪತಿ ಪಾತಣ್ಣ ಜೊತೆ ಹೇಳಿಕೊಂಡಿದ್ದ ಶಿಕ್ಷಕಿ ತಿಪ್ಪೀರಮ್ಮ, ಎಸ್.ಡಿ.ಎಂ.ಸಿ ಸದಸ್ಯ ಲಿಂಗಪ್ಪ, ಸಹಶಿಕ್ಷಕಿ ಸವಿತಾ, ಶಾಂತಮ್ಮ ಹಾಗೂ ಸಹಶಿಕ್ಷಕ ರಮೇಶ್ ಪ್ರತಿನಿತ್ಯ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂದು ಅಳಲು ತೋಡಿಕೊಂಡಿದ್ದರು ತಿಪ್ಪೀರಮ್ಮ. 

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಂಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ.