ಗದಗ: ಮಧೋಳ್ ನಾಯಿಗೆ ಇರುವ ನಿಯತ್ತು ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಅಂತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಜಮಖಂಡಿಯಲ್ಲಿ ಮಾತನಾಡಿದ ಬೆನ್ನೆಲ್ಲೆ ಇಂದು ಗದಗ್ ನಲ್ಲಿ ನಟ ಪ್ರಕಾಶ್ ರೈ ಅವರು ಟಾಂಗ್ ನೀಡಿದ್ದಾರೆ.

‘ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವುದಕ್ಕೆ ಮುಧೋಳ ನಾಯಿಗಳು ವೋಟ್‌ ಹಾಕುವುದಿಲ್ಲ. ವೋಟ್‌ ಹಾಕುವವರು ಕರ್ನಾಟಕದ ಜನತೆ ಹೀಗಂತ ಹೇಳಿದ್ದು ಪ್ರಕಾಶ್ ರೈ ಲಡಾಯಿ ಪ್ರಕಾಶನ ಮತ್ತು ದಲಿತ ಕಲಾಮಂಡಳಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು ಇದೇ ವೇಳೆ ಅವರು ಮಾತನಾಡಿ ‘ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವುದಕ್ಕೆ ಮುಧೋಳ ನಾಯಿಗಳು ವೋಟ್‌ ಹಾಕುವುದಿಲ್ಲ. ವೋಟ್‌ ಹಾಕುವವರು ಕರ್ನಾಟಕದ ಜನತೆ. ಪ್ರಧಾನಿ ಮೋದಿ ಅವರೇ, ಜನರ ಪ್ರಶ್ನೆಗಳಿಗೆ ಉತ್ತರ ಕೊಡಿ’ ಎಂದು ಪ್ರಧಾನಿ ಮೋದಿಗೆ ಸವಾಲು ಹಾಕಿದರು. ಇದೇ ವೇಳೆ ಅವರು ಮಾತನಾಡಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು. ಸಂವಿಧಾನ ಬದಲಿಸಲು ಹೊರಟಿರುವವರನ್ನು ನಾವು ಬದಲಿಸೋಣ’ ಎಂದು ಹೇಳಿದರು.