ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಎಲ್ಲಾ  ಜಿಲ್ಲೆಯ ಜಿಲ್ಲಾ ಸ್ವೀಪ್ ಸಮಿತಿಗಳು, ವಿವಿಧ ಸಂಘಟನೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಎಲ್ಲೆಡೆ  ಮತದಾನ ಕುರಿತು ಜನ ಜಾಗೃತಿ, ಬೀದಿ ನಾಟಕ, ಅಭಿಯಾನ, ಜಾಥಾ ಮಾಡುವ ಮೂಲಕ ಹೆಚ್ಚಿನ ಮತದಾನ ಮಾಡುವಂತೆ ಮನವಿ ಮಾಡುತ್ತಿದೆ. 
  ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ  ಸುದ್ದಿಗಾರರು ಬನ್ನಿ ಪ್ರ್ರಜಾಪ್ರಭುತ್ವದ ಹಬ್ಬ ಆಚರಿಸೋಣ.. ಎಂದು ಮನವಿ ಮಾಡುತ್ತಿದ್ದಾರೆ. ಪತ್ರಕರ್ತರು ಮತದಾನದಿಂದ ಸಾಕಷ್ಟು ದೂರ ಇರುತ್ತಾರೆ. ಅದರಲ್ಲೂ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯಲ್ಲಿ ಡೆಸ್ಕ್ ನಲ್ಲಿ ಕೆಲಸ ಮಾಡುವ ಸಾವಿರಾರು ಮಂದಿ ಪತ್ರಕರ್ತರಿಗೆ ಮತದಾನ ಮಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನ  ಮನಗಂಡ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಹಾಗೂ ಕರ್ನಾಟಕ ಟಿವಿ ಸಹಯೋಗದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ ಜಾಗೃತಿ  ಮಾಡುತ್ತಿದೆ. ಮತ್ತು ಅಂಚೆ ಮತ  ಹಾಕಲು ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದೆ.

  ರಾಜ್ಯಾಧ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮತದಾನ ಜಾಗೃತಿ ಮೂಡಿಸುವ ಬ್ಯಾನರ್, ಪ್ಲೆಕ್ಸ್‍ಗಳಲ್ಲಿ ಏಪ್ರಿಲ್ 18 ರಂದು ಲೋಕಸಭೆ ಚುನಾವಣೆಯ ಮತದಾನ ಮಾಡುವಂತೆ  ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅದರಲ್ಲೂ ಜರ್ನಲಿಸಂ ಸ್ಟೂಡೆಂಟ್‍ಗಳ ಮೂಲಕ ಜಾಗೃತಿ ಮೂಡಿಸಲು ಯೋಜಿಸಿದೆ.

 ಶೇ. 100 ರಷ್ಟು ಮತದಾನ ಆಗುವಂತೆ ಮಾಡುವಲ್ಲಿ ಪತ್ರಕರ್ತರ ಪಾತ್ರ ಹಿರಿದಾಗಿದೆ ಈ ದೆಸೆಯಲ್ಲಿ  ನಾವು ರಾಜಕೀಯ ಸುದ್ದಿ ಜತೆಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಮಾಡುತ್ತಿದೆ ಎಂದು ಸಂಘದ ಅಧ್ಯಕ್ಷರಾದ ಕಲಾವಿದ ವಿಷ್ಣು ಅವರು ಹೇಳಿದ್ದಾರೆ. 

  18 ವರ್ಷ ವಯಸ್ಸು ಪೂರ್ಣಗೊಂಡವರು, ಇದುವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸದೇ ಇದ್ದಲ್ಲಿ, ಅಂತಹವರು ಕೂಡಲೆ ಆಯಾ ಮತಗಟ್ಟೆಯ ಬಿಎಲ್‍ಒ ಅವರಲ್ಲಿ ನಮೂನೆ 6 ಭರ್ತಿ ಮಾಡಿ ಸಲ್ಲಿಸಬೇಕು.  ರಾಜ್ಯದಲ್ಲಿ ಮಹಿಳಾ ಮತದಾರರು ಹೆಚ್ಚಿನ ಪ್ರಮಾಣದಲ್ಲಿದ್ದರೂ, ಮಹಿಳಾ ಮತದಾನ ಮಾತ್ರ ಕಡಿಮೆ ಪ್ರಮಾಣ ದಾಖಲಾಗುತ್ತಿದೆ.  ಈ ಬಾರಿ ಮಹಿಳಾ ಮತದಾನ ಪ್ರಮಾಣ ಹೆಚ್ಚಾಗುವಂತೆ ಮಹಿಳೆಯರಿಗೆ ಜಾಗೃತಿ ಮೂಡಿಸಲು ಮಹಿಳಾ   ಪತ್ರಕರ್ತರ ಸಭೆ ನಡೆಸಿ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.