ಚಿತ್ರದುರ್ಗ: ಕೊಲೆಯಾದ 13 ದಿನಗಳಲ್ಲಿಯೇ ಆರೋಪಿಗೆ ಶಿಕ್ಷೆಯನ್ನು ವಿಧಿಸುವುದರ ಮೂಲಕ ಚಿತ್ರದುರ್ಗ ನ್ಯಾಯಾಲಯ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ.

ಘಟನೆಯ ವಿವರ ;

ಚಿತ್ರದುರ್ಗ ತಾಲ್ಲೂಕಿನ ಬಗ್ಗಲರಂಗವ್ವನಹಳ್ಳ ಗ್ರಾಮದಲ್ಲಿ ವಾಶವಾಗಿದ್ದ ಶ್ರೀಧರ್ ಮತ್ತು ಸಾಕಮ್ಮ ಎಂಬುವವರು ಪ್ರೀತಿಸಿ ವಿವಾಹವಾಗಿದ್ದು 3 ವರ್ಷದ ಧನುಷ್ ಮತ್ತು ಒಂದುವರೆ ವರ್ಷದ ಮೈಲಾರಿ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಕಳೆದ 2 ವರ್ಷದಿಂದ ಸಂಸಾರದಲ್ಲಿ ಬಿರುಕು ಉಂಟಾಗಿದ್ದು, ಹೆಂಡತಿಯ ಮೇಲೆ ಸಂಶಯ ಪಡುತ್ತಿದ್ದ ಶ್ರೀಧರ ಅಕೆಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆಯನ್ನು ನೀಡುತ್ತಿದ್ದನು, ಈ ಬಗ್ಗೆ ಗ್ರಾಮದ ಹಿರಿಯರು ಬುದ್ದಿವಾದ ಹೇಳಿದರು ಸಹಾ ಆತ ತನ್ನ ನಡತೆಯಲ್ಲಿÉೈಆವುದೇ ಬದಲಾವಣೆಯನ್ನು ಮಾಡಿಕೊಂಡಿರಲಿಲ್ಲ.
2018ರ ಜೂನ್ 26ರ ರಾತ್ರಿ ಹೆಂಡರಿ ಸಾಕಮ್ಮಳೊಂದಿಗೆ ಗಲಾಟೆ ಮಾಡಿ ರಾತ್ರಿ ಮಲಗಿದಾಗ ಆರೋಪಿ ಶ್ರೀಧರ್ ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದ 27 ಬೆಳಿಗ್ಗೆ 2.30ರ ಸಮಯದಲ್ಲಿ ಮನೆಯಲ್ಲಿ ಮಲಗಿದ್ದ ಸಾಕಮ್ಮಳ ಮೇಲೆ ಮನೆಯ ಹೊರಗಡೆ ಇದ್ದ ಕಲ್ಲನ್ನು ಮಲಗಿದ್ದ ಸಾಕಮ್ಮಳ ತಲೆಯ ಮೇಲೆ ಹಾಕುವುದರ ಮೂಲಕ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮೈಲಾರಿ ಹಾಲುಣ್ಣುತ ನಿದ್ರೆಗೆ ಜಾರಿದ್ದ, ಧನುಷ್ ತಾಯಿ ಹೊಟ್ಟೆ ಮೇಲೆ ಮಲಗಿದ್ದ ವೇಳೆ ನಡೆಸಲಾಯಿತು. ಈತ ಕೊಲೆ ಮಾಡಿ ಹೊರಗಡೆ ಹೋಗುತ್ತಿದ್ದನ್ನು ಗ್ರಾಮಸ್ಥರು ನೋಡಿದ್ದು, ಇದರ ಬಗ್ಗೆ ತುರುವನೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆಯನ್ನು ಕೈಗ್ಗೊಂಡು ಆರೋಪಿಯನ್ನು ಬಂಧಿಸಲಾಯಿತು.
ಈ ಪ್ರಕರಣದ ಬಗ್ಗೆ ಇಂದು ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ತ್ವರಿತವಾಗಿ ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ ಅಪ್ಪನ ಕೃತ್ಯದ ಬಗ್ಗೆ ಹೈ ವಿಟ್ನೆಸ್ ಹೇಳಿರುವ ಧನುಷ್.

ಎರಡು ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಕ್ತಾಯಗೊಳಿಸಿ ಅರೋಪಿಯ ವಿರುದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿ ಶ್ರೀಧರ್‍ಗೆ ನ್ಯಾಯಾಧೀಶರಾದ ವಸ್ತ್ರಮಠ್ ಜೀವವಾಧಿ ಶಿಕ್ಷೆ ಹಾಗೂ 30 ಸಾವಿರ ರೂ.ಗಳ ದಂಡವನ್ನು ವಿಧಿಸಿದೆ.

ಕೊಲೆ ಪ್ರಕರಣ

ಜೂ. 27 ರಂದು ನಡೆದಿದ್ದ ಇದರ ಬಗ್ಗೆ ಪ್ರಕರಣ ದಾಖಲಾಗಿ ವಾದ ವಿವಾದವನ್ನು ಆಲಿಸಿ ತ್ವರಿತವಾಗಿ ಕೇವಲ 13 ದಿನಗಳಲ್ಲಿಯೆ ಪ್ರಕರಣದ ತೀರ್ಪು ನೀಡಿದ ಹೆಗ್ಗಳಿಕೆಗೆ ಚಿತ್ರದುರ್ಗ ನ್ಯಾಯಾಲಯ ಪಾತ್ರವಾಗಿದೆ ಸರ್ಕಾರದ ಪರವಾಗಿ ಬಿ.ಜಯರಾಮ್ ವಿಚಾರಣೆಯನ್ನು ನಡೆಸಿದರು.
ಚಿತ್ರದುರ್ಗ ಕೋರ್ಟ್ ಹಾಲ್‍ನಲ್ಲಿ ಇಂದು ಮನಕಲಕುವ ಘಟನೆ.ತೀರ್ಪು ಬಳಿಕ ಮಕ್ಕಳನ್ನು ನೋಡುವ ಆಸೆ ವ್ಯಕ್ತಪಡಿಸಿದ ಶ್ರೀಧರ್. ಮಕ್ಕಳನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಶ್ರೀಧರ್. ಮೊದಲಿಗೆ ಅಪ್ಪನ ಬಳಿ ಹೋಗಲು ನಿರಾಕರಿಸಿದ ಮಗ ಧನುಷ್. ಅಪ್ಪ ಶ್ರೀಧರ್‍ಗೆ ನೀನೆ ಎಂದು ಹೇಳಿದ ಮಗ ಧನುಷ್. ಕೆಲ ಕ್ಷಣದ ಬಳಿಕ ಅಪ್ಪನ ಭುಜದ ಮೇಲೆ ಮಲಗಿದ ಧನುಷ್. ಅಪ್ಪ ಮಕ್ಕಳ ದೃಶ್ಯ ಕಂಡು ನ್ಯಾಯಾಲಯದ ಆವರಣದ್ದಲ್ಲಿದ್ದವರ ಕಣ್ಣಲ್ಲಿ ನೀರು ಬಂದಿತು.