ಬೆಂಗಳೂರು: ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ & ಮತದಾರ ಪಟ್ಟಿಗೆ ಹೆಸರು ಸೇರ್ಪಡೆ ಸೇವೆಗಳನ್ನು ಸಕಾಲ ಯೋಜನೆಯ ‘ಜನಸೇವಕ’ ಅಡಿ ಒದಗಿಸುವ ಕುರಿತು ಇಲಾಖೆಗಳು ಸಹಮತ ವ್ಯಕ್ತಪಡಿಸಿವೆ. ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಸೇವೆಗಳನ್ನು ಶೀಘ್ರದಲ್ಲಿ ಜನಸೇವಕ ವ್ಯಾಪ್ತಿಗೆ ತರಲಾಗುತ್ತದೆಎಎಎಎ. ಕೊರೋನಾ ವೈರಸ್ ಸೋಂಕು ತಡೆಯುವ ಸಲುವಾಗಿ ಲಾಕ್ ಡೌನ್ ಘೋಷಿಸಿದ್ದರಿಂದ ‘ಜನಸೇವಕ’ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದ್ದಾರೆ.