ನವದೆಹಲಿ: ಮತಯಂತ್ರಗಳ ಮೂಲಕ ಸುಲಭವಾಗಿ ಮೋಸ ಮಾಡಬಹುದು. ಹೀಗಾಗಿ ಮತಯಂತ್ರಗಳನ್ನು ವಿವಿಪ್ಯಾಟ್ ನೊಂದಿಗೆ ಕ್ರಾಸ್ ಚೆಕ್ ಮಾಡಿ ನಂತರ ಫಲಿತಾಂಶ ಪ್ರಕಟಿಸಬೇಕೆಂದು 21 ವಿಪಕ್ಷಗಳು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ರಂಜನ್ ಗೊಗೋಯ್ ನೇತೃತ್ವದ ಪೀಠ, ಚುನಾವಣಾ ಆಯೋಗಕ್ಕೆ ನೋಟಿಸ್​ ನೀಡಿ, ವಿಪಕ್ಷಗಳ ಆರೋಪದ ಬಗ್ಗೆ ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಉತ್ತರಿಸಬೇಕು ಎಂದು ಹೇಳಿದೆ. ಇದರ ಮುಂದಿನ ವಿಚಾರಣೆ ಮಾರ್ಚ್​ 25ಕ್ಕೆ ಮುಂದೂಡಿದೆ.