ಬೆಂಗಳೂರು: ಬರಲಿರುವ ವಿಧಾನ ಸಭಾ ಚುನಾವಣೇಯಲ್ಲಿ ನಿಮ್ಮ ಓಟು ಇದೆಯಾ ಅಂತ ಖಾತರಿಪಡಿಸಿಕೊಳ್ಳಲು ಏನು ಮಾಡಬೇಕಂದ್ರೆ.?9731979899 ಸಂಖ್ಯೆಗೆ ಎಸ್.ಎಂ.ಎಸ್.ಕಳುಹಿಸುವ ಮೂಲಕ ಖಾತರಿ ಮಾಡಿಕೊಳ್ಳಬಹುದಾಗಿದೆ.

ಹೇಗೆ ಮಾಹಿತಿ ಪಡೆಯುವುದು ಮೆಸೇಜ್ಗೆ ಹೋಗಿ ಇಲ್ಲಿ ಮೊದಲು KAEPIC ಎಂದು ಟೈಪ್ ಮಾಡಿ
ಒಂದು ಸ್ಪೇಸ್ ನೀಡಿ, ನಂತರ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ ಟೈಪ್ ಮಾಡಿದ
ನಂತರ ಈ 9731979899 ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್.ಕಳುಹಿಸಿ ಕ್ಷಣಾರ್ಧದಲ್ಲಿ
ನಿಮ್ಮ ಅಂಗೈನಲ್ಲಿನ ಮೊಬೈಲ್ಗೆ ವಿವರ ಬರುತ್ತದೆ. ಅಥವಾ ವೆಬ್ಸೈಟ್ನಲ್ಲಿ ಹುಡುಕಲು

ಅವಕಾಶ ಇದ್ದು www.ceokarnataka.kar.nic.in ನಲ್ಲಿಯು ವೀಕ್ಷಣೆ ಮಾಡಬಹುದಾಗಿದೆ.
ಚುನಾವಣಾ ಮಾಹಿತಿಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಮಾಹಿತಿ
ಹಾಗೂ ದೂರುಗಳನ್ನು ಸ್ವೀಕರಿಸಲು08194-222176 ಸಹಾಯವಾಣಿ ಸ್ಥಾಪಿಸಲಾಗಿದೆ.

ರಾಜ್ಯಕ್ಕೆ ಸಂಬಂಧಿಸಿದಂತೆ ಆಯೋಗದ 1950 ಟೋಲ್ಫ್ರೀ ಸಂಖ್ಯೆಗೆ ಕರೆ ಮಾಡಬಹುದಾಗಿದೆ.