ಬೆಂಗಳೂರು: ಮತದಾನದ ವೇಳಾ ಪಟ್ಟಿಯನ್ನು ಒಂದು ಗಂಟೆ ಹೆಚ್ಚಳಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್

ಹೇಳಿದ್ದಾರೆ. ಏಕೆಂದರೆ ಬಿಸಿಲಿನ ಧಗೆಯಿಂದ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ಈ ಬಾರಿಯ ವಿಧಾನಸಭಾ ಚುನಾವಣೆಯು ಬೇಸಿಗೆ ಕಾಲದಲ್ಲಿ ನಡೆಯುತ್ತಿರುವುದು ಜನರು ಸಹಜವಾಗಿ ಬಿಸಿಲಿನ ತಾಪಮಾನಕ್ಕೆ ಹೆದರಿ ಮತಚಲಾವಣೆ ಮಾಡದೇ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಹೆಚ್ಚಾಗುವುದನ್ನು ಮನಗಂಡಿದೆ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯ ಮತದಾನದ ಸಮಯವನ್ನು ಒಂದು ಗಂಟೆಗಳ ಕಾಲ ಹೆಚ್ಚಳ ಮಾಡಲಾಗಿದೆ.