ಬೆಂಗಳೂರು: ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಮತದಾರನ ಮನ ಒಲಿಸಲು ರಾಜಕೀಯ ಪಕ್ಷಗಳು ಜಾಹೀರಾತಿನ ಮೊರೆ ಹೋಗಿವೆ.

ಈ ನಡುವೆಯೇ ಚುನಾವಣಾ ಆಯೋಗ, ಚುನಾವಣೆ ನಡೆಯುವ ಮತ್ತು ಅದರ ಹಿಂದಿನ ದಿನ ಜಾಹೀರಾತು ಪ್ರಕಟಿಸದಂತೆ ಸೂಚಿಸಿದೆ. ಪ್ರಮಾಣಿಕೃತವಲ್ಲದ ಜಾಹೀರಾತು ಪ್ರಸಾರಕ್ಕೆ ತಡೆ ನೀಡಲಾಗಿದೆ. ಯಾವುದೇ ಪಕ್ಷ ಅಭ್ಯರ್ಥಿ ಅಥವಾ ಯಾವುದೇ ಸಂಸ್ಥೆಗೆ ಸಂಬಂಧಿಸಿದ ಜಾಹೀರಾತು ಪ್ರಸಾರ ಮಾಡುವಂತಿಲ್ಲ. ಆದರೆ, ಇದು ಆಯೋಗದಿಂದ ಮೊದಲೇ ಪ್ರಾಮಾಣಿಕೃತಗೊಂಡ ಜಾಹೀರಾತುಗಳಿಗೆ ಅನ್ವಯಿಸುವುದಿಲ್ಲವಂತೆ.