ಚಿತ್ರದುರ್ಗ: ರಾಜ್ಯದಲ್ಲಿ ಕೆಲವೊಂದು ಊರುಗಳಿಗೆ ತಮ್ಮದೇ ಆದ ಖ್ಯಾತಿಯನ್ನು ಹೊಂದಿವೆ. ಮೈಸೂರು ಆರಮನೆ, ಬೆಳಗಾವಿ ಕುಂದಾನಗರಿ, ದಾರವಾಡ ಫೇಡ, ಆದ್ರೆ  ಚಿತ್ರದುರ್ಗ ಅಂದ್ರೆ ಚಿತ್ರದುರ್ಗದಲ್ಲಿ ಮಠಗಳ ಊರು ಅಂತ ಕರೆಯಬಹುದು ಎಂದರು.

ನಿನ್ನೆ ನಗರದ ತ.ರಾ.ಸು ರಂಗಮಂದಿರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ‌ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  ಜಾತಿಗೊಂದು ಮಠಗಳಾದ ಮೇಲೆ ಜಾತಿ ವಿನಾಶ ಸಾಧ್ಯವೆ, ಜಾತಿ ಮಠಗಳಿಂದ ಆಯಾ ಸಮುದಾಯಗಳು ಉದ್ಧಾರ ಆಗಿವೆಯೇ? ಮುಖ್ಯಮಂತ್ರಿ ಅಧಿಕಾರದಿಂದ ಇಳಿಸಿದರೆ ಹುಷಾರು ಅಂತ ಹೇಳುವ ಜಾತಿಸ್ವಾಮಿ, ರಾಜಕಾರಣಿಯೊಬ್ಬ ಜೈಲಿಗೆ ಹೋದರೆ ಮಾತಾಡಿಸೋಕೆ ಹೋಗುವ ಸ್ವಾಮಿ . ಜೈಲಿಂದ ಬಂದಾಗ ಹೂಮಾಲೆ ಹಾಕಿ ಸ್ವಾಗತಿಸಲು ಹೋಗುವ ಸ್ವಾಮಿ ಮೇಲ್ವರ್ಗದ ಮಠಗಳಿಗೆ ಹಣ ನೀಡಿ ನಮಗೇಕೆ ಕೊಡಲ್ಲ ಎಂದ ಓಬಿಸಿ ಸ್ವಾಮಿಗಳು ಇದ್ದಾರೆ ಎಂದರು.

ಇನ್ನೋರ್ವ ಸ್ವಾಮಿ ನಮ್ಮ ಜಾತಿಯವ್ರಿಗೇ ಸಿನೆಮಾದ ಹಿರೋ ಮಾಡಿ ಅಂತ ಬಾಯಿಬಡ್ಕೋತಾನೆ ಇವರೆಲ್ಲಾ ಸ್ವಾಮಿಗಳಾ, ಬಸವ ತತ್ವ ಪರಿಪಾಲಕರಾ? ಕಾವಿ ಹಾಕಿದರೂ ಆಸೆ ಬಿಡಲಿಲ್ಲ, ಜಾತಿ ಬಿಡಲಿಲ್ಲ, ಸರ್ವ ಸಂಗ ಪರಿತ್ಯಾಗಿಗಳೆಂದು ಹೇಳಿ ಎಸಿ ರೂಮು, ಕಾರುಗಳಲ್ಲಿ ಮೆರೀತಾರೆ ಎಂದು ಹೇಳಿದರು.