ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ, ಮಠಗಳು ರಾಜಕಾರಣದ ಶಕ್ತಿ ಕೇಂದ್ರಗಳಾಗಿ ಮಾರ್ಪಡುತ್ತವೆ. ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಷ್ಟ್ರ ನಾಯಕರುಗಳಾ ಕಾಂಗ್ರೆಸ್ ನ ರಾಹುಲ್ ಗಾಂಧಿ, ಬಿಜೆಪಿ ಅಮಿತ್ ಶಾ ಅವರು  ಮಠಗಳಿಗೆ ಭೇಟಿ ನೀಡುತ್ತಿರುವುದ ಸಾಮಾನ್ಯ ಜನರಿಗೆ ಕುತುಹಲ.

ಚುನಾವಣೆ ಹತ್ತಿರ ಬಂದಾಗ ಈ ನಾಯಕರುಗಳಿಗೆ ಮಠಗಳ ನೆನಪಾಗುತ್ತದೆ. ಗುಡಿ ಗುಂಡಾರಗಳಿಗೆ ಹೋಗಿ ಪೂಜೆ ಹವನ ಸಲ್ಲಿಸುತ್ತಾರೆ. ಅವರ ನಂಬಿಕೆಗಳ ಬಗ್ಗೆ ಯಾರದೇ ಆಕ್ಷೇಪಣೆಗಳು ಇರುವುದಿಲ್ಲ.

ಆದರೆ ಮಠಗಳಿಗೆ ಇಂತವರನ್ನು ಗೆಲ್ಲಿಸುವ ಶಕ್ತಿ ಇದೆಯಾ. ಅಥವ ರಾಜಕಾರಣಿಗಳು ಮಠಕ್ಕೆ ಭೇಟಿ ನೀಡುವುದರಿಂದ ಆಯಾ ಮಠದ ಭಕ್ತರು ಓಟು ನೀಡುತ್ತಾರ ಎಂಬ ಪ್ರಶ್ನೆ ಮತದಾರರಿಗೆ ಉದ್ಬವಿಸದೇ ಇರಲಾರದು.

ಹಿಂದೆಲ್ಲಾ ಮಠಗಳಿಗೆ ಇಂತವರನ್ನು ಗೆಲ್ಲಿಸುವ ಅಥವಾ ಸೋಲಿಸುವ ಶಕ್ತಿ ಇದ್ದರೂ ಸಹ ಸ್ವಾಮೀಜಿಗಳು ಪ್ರಯೋಗ ಮಾಡಿರಲಿಲ್ಲ. ಅದರಂತೆ  ಚುನಾವಣೆ ಬಂದಾಗ ಹಳ್ಳಿಯಲ್ಲಿರುವ ಗೌಡರೂ, ಗೊಂಚಿಗಾರ ಅಥವಾ ಪಟೇಲರು ಹೇಳಿದ್ರೆ ಸಾಕು ಜನರು ಓಟು ಹಾಕುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿರುವುದರಿಂದ ಯಾರು ಯಾರ ಮತನ್ನು ಕೇಳುವ ಸ್ಥಿತಿಯಲ್ಲಿ ಮತದಾರನು ಇಲ್ಲವಂತೆ.

ಮತದಾರ ಜಾಗೃತಿಗೊಂಡಿದ್ದಾನೆ ಯಾರು ಎಷ್ಟೇ ಹಣ ಹಂಚಿದರೂ, ಯಾರೇ ಬಂದು ಹೇಳಿದರು ಮತವನ್ನು ಮಾತ್ರ ಯಾರಿಗೆ ಹಾಕಬೇಕೆಂದು ತೀರ್ಮಾನಿಸಿರುತ್ತಾನೆ. ಅಲ್ವ ಹಾಗಾದರೆ ಮಠಗಳು ರಾಜಕಾರಣದ ಶಕ್ತಿ ಕೇಂದ್ರ ಆಗಲು ಸಾಧ್ಯವಾ.?!