ಬೆಂಗಳೂರು: ರಾಜ್ಯ ಸರ್ಕಾರ ಕೊರೋನಾ ಕುರಿತು ಶಾಲಾ ಮಕ್ಕಳಿಗೆ ಒಂದು ಪಾಠವನ್ನು ಇಡಲು ಮುಂದಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಪಠ್ಯದಲ್ಲಿ ಕೊರೋನಾ ಸೋಂಕಿನ ಇತಿಹಾಸ, ಅದರ ಪರಿಣಾಮಕುರಿತು, ಅದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ಅವಶ್ಯಕತೆ ಇದೆ. ಜೊತೆಗೆ
ಮಾಸ್ಕ್ ಧರಿಸುವ ಅಗತ್ಯ, ದೈಹಿಕ ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು, ಶುಚಿಯಾಗಿರುವುದರ ಬಗ್ಗೆ ವಿವರಣೆಯಿರುತ್ತದೆ ಎಂದು ಹೇಳಿದ್ದಾರೆ.