ಬೆಂಗಳೂರು : ರಾಹು ಕಾಲ ಗುಳಿಕಾಲ ನೋಡಿಕೊಂಡೇ ಕೆಲಸ ಪ್ರಾರಂಭಿಸುವಲ್ಲಿ ಲೋಕೋಪಯೋಗಿ ಸಚಿವ ಎಚ್. ಡಿ.ರೇವಣ್ಣ ಮೊದಲಿಗರು ಅಲ್ವ. ಹಾಗೇ  ಭಾನುವಾರ  ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯನ್ನು ಭಾನುವಾರ ಉದ್ಘಾಟಿಸುವಾಗ ರೇವಣ್ಣರು ವಾಸ್ತು ರೀತಯಲ್ಲಿ ಪ್ರಾರಂಭಮಾಡಿದ್ದು ಹೇಗೆ ಅಂತೀರ.?

ಕಾರ್ಯಕ್ರಮದ  ಪ್ರಕಾರ, ರೇವಣ್ಣ ಪಶ್ಚಿಮಾಭಿಮುಖವಾಗಿ ನಿಂತು ಟೇಪ್ ಕತ್ತರಿಸಬೇಕಿತ್ತು. ಆದರೆ, ಪೂಜೆಯಾದ ಬಳಿಕ ವಾಸ್ತು ಪ್ರಕಾರ ಪೂರ್ವ ದಿಕ್ಕಿಗೆ ನಿಂತ ರೇವಣ್ಣ, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ಟೇಪ್ ಕಟ್ ಮಾಡಿಸುವ ಮೂಲಕ ಶಿರಾಡಿಘಾಟ್ ರಸ್ತೆಗೆ ಚಾಲನೆ ನೀಡಿದರು.

ಹೀಗೆ ಕೆಲದಿನಗಳ ಹಿಂದೆ ಹಾಸನ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣ ಗುದ್ದಲಿ ಪೂಜೆ ವೇಳೆ ಅರ್ಚಕರಿಗೆ ಪೂಜಾ ವಿಧಿವಿಧಾನಗಳ ಬಗ್ಗೆ ಪಾಠ ಮಾಡಿದ್ದ ನೆನಪಿಸಿಕೊಳ್ಳ ಬಹುದು. ಆದರೆ ಇನ್ನುಮುಂದೆ ಯಾವುದೇ ಕಾರ್ಯಕ್ರಮ ನಡೆಯ ಬೇಕಾದರೆ ರೇವಣ್ಣರು ಹೇಳಿದಂತೆ ಮಾಡಬೇಕು ಇದು ಅಧಿಕಾರಿಗಳಿಗೆ ಪಿರಿ ಪಿರಿ ಅಂತ ಮಾತ್ರ ಅನ್ನಂಗಿಲ್ಲ.!