ಸುಮಲತಾ ಎಂಬ ಎಷ್ಟೇ ಹೆಸರುಗಳನ್ನು ಸೃಷ್ಟಿಸಿದರೂ ಮಂಡ್ಯದ ಜನ ಯಾಮಾರುವುದಿಲ್ಲ,  ಯಾರಿಗೆ ಮತ ಹಾಕಬೇಕೆಂದು ಅವರಿಗೆ ಗೊತ್ತು ಎಂದು ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಮಂಡ್ಯ ಲೋಕಸಭಾ ಕಣದಲ್ಲಿ ಸುಮಲತಾ ಎಂಬ ಹೆಸರಿನಲ್ಲಿ ಇತರೆ ಮೂವರು ನಾಮಪತ್ರ ಸಲ್ಲಿಸಿರುವ  ವಿಚಾರವಾಗಿ ಕಿಡಿಕಾರಿದ ಅವರು, ಮಂಡ್ಯದ ಜನ ತಮ್ಮ ಮತ ಯಾರಿಗೆ ಹಾಕಬೇಕು ಎಂಬುದನ್ನು ಅವರೇ ನಿರ್ಧಾರ ಮಾಡ್ತಾರೆ, ಮತಗಟ್ಟೆಗೆ ಹೋದಾಗ ನಾನು ನನ್ನಿಷ್ಟದಂತೆ ವೋಟ್ ಹಾಕುತ್ತೇನೆಂದರು.