ವಯಸ್ಸಾದಂತೆ ಮಂಡಿ ಹಾಗೂ ಕೀಲು ನೋವಿನ ಬಾಧೆ ಕಾಡುತ್ತದೆ. ಅದಕ್ಕೆ ಮನೆಯ ಮದ್ದನ್ನು ತಯಾರಿಸಿಕೊಳ್ಳ ಬಹುದು.

ಅಮೃತ ಬಳ್ಳಿಯ ಕಾಂಡ ಹಾಗೂ  ಒಣ ಶುಂಠಿ  ಇವೆರಡನ್ನೂ ಬೇರೆ ಬೇರೆಯಾಗಿ ಜಜ್ಜಿಕೊಂಡು ಎರಡು ಗ್ಲಾಸ್ ಅಷ್ಟು ನೀರನ್ನು ಬಿಸಿ ಮಾಡಲು ಇಟ್ಟು ನೀರು ಸ್ವಲ್ಪ ಬಿಸಿ ಆದ ಮೇಲೆ ಜಜ್ಜಿ ಇಟ್ಟುಕೊಂಡ ಅಮೃತ ಬಳ್ಳಿಯ ಕಾಂಡ ಮತ್ತು ಒಣ ಶುಂಠಿ ಪುಡಿ ಇವೆರಡನ್ನೂ ಹಾಕಿ ಒಮ್ಮೆ ಮಿಕ್ಸ್ ಮಾಡಿ. ಎರಡು ಲೋಟ ನೀರು ಒಂದು ಲೋಟಕ್ಕೆ ಇಳಿಯುವವರೆಗೂ ಕುದಿಸಬೇಕು.

 ಆಮೇಲೆ ಅದನ್ನು ಸೋಸಿಕೊಂಡು ಬಳಸಬೇಕು. ಹೀಗೆ ಮಾಡಿ 30 ದಿನಗಳ ಕಾಲ ದಿನಕ್ಕೆ ಒಂದು ಬಾರಿಯಂತೆ ಸೇವಿಸಿದರೆ ಎಲುಬು, ಸಂದು ನೋವು ಕಡಿಮೆ ಆಗುತ್ತದೆ.