ಚಿತ್ರದುರ್ಗ: ಹಿಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ವಿರುದ್ಧ ಪ್ಲೇಯಿಂಗ್ ಸ್ವ್ಕಾಡ್ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಎಪ್.ಐ.ಆರ್ ದಾಖಲಿಸಿದೆ ಎಂದು ತಿಳಿದು ಬಂದಿದೆ.

ಭಾನುವಾರ ರಾಜ್ಯ ಮಟ್ಟದ ಭೋವಿ ಜಾನಾಂಗದ ಸಭೆಯಲ್ಲಿ  ಚಿಂತನ- ಮಂಥನ ಕಾರ್ಯಕ್ರಮವನ್ನು ಅನುಮತಿ ಪಡೆಯದೇ ಮಠದಲ್ಲಿ ಗೌಪ್ಯ ಸಭೆ ನಡೆಸಿದ್ದ ಶ್ರೀಗಳು ಬಗ್ಗೆಈ ಕೇಸ್ ದಾಖಲಿಸಲಾಗಿದೆಂತೆ.

ನೋಟಾ ಮತ ಚಲಾವಣೆ ಕುರಿತು ಚರ್ಚೆ ನಡೆಸಿದ್ದ ಶ್ರೀಗಳು ಸಭೆ ನಡೆಸಿ‌ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂಬುದು ದೂರು.  ಧಾರ್ಮಿಕ ಸಂಸ್ಥೆಯ ಅಧಿನಿಯಮದ ಪ್ರಕಾರ ಮೊ ನಂ 102/19, ರ ಕಲಂ 7, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಅಧಿನಿಯಮ 1988 ಮತ್ತು 171(ಎಫ್) ಅಡಿಯಲ್ಲಿ  ದೂರು ದಾಖಲಿಸಿಕೊಂಡಿದ್ದಾರೆ ಪ್ಲೇಯಿಂಗ್ ಸ್ವ್ಕಾಡ್.!