ಬೆಂಗಳೂರು : ನಮ್ಮಲ್ಲಿ ಯಾವುದೇ ಭಿನ್ನಮತವಿದ್ದರೂ ಕಲಾಪಕ್ಕೆ ಹಾಜರಾಗಬೇಕು. ಗೈರಾದರೆ ಬಿಜೆಪಿಯವರು ಲಾಭ ಪಡೆಯಲು ಮುಂದಾಗುತ್ತದೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹೇಳಿದರು.

ನಾಳೆ ವಿಧಾನಸಭೆಯಲ್ಲಿ ನಡೆಯಲಿರುವ ಹಣಕಾಸು ಮಸೂದೆ ಮಂಡನೆ ವೇಳೆ ಕಾಂಗ್ರೆಸ್ ನ ಎಲ್ಲ ಶಾಸಕರು ಹಾಜರಾಗಬೇಕು, ನಮ್ಮ ಸದಸ್ಯರು ಕಡಿಮೆ ಸಂಖ್ಯೆಯಲ್ಲಿ ಇದ್ದರೆ ಹಣಕಾಸು ಮಸೂದೆ ಮತಕ್ಕೆ ಹಾಕಿ ಎಂದು ಅವರು ಹೇಳಬಹುದು, ಮೈತ್ರಿ ಸರ್ಕಾರದ ಮೊದಲ ಬಜೆಟ್ ನ ಹಣಕಾಸು ಮಸೂದೆ ಬಿದ್ದು ಹೋದರೆ ಸರ್ಕಾರಕ್ಕೆ ಅಪಾಯವಿದೆ ಎಂದು ಹೇಳಿದರು ಸಭೆಯಲ್ಲಿ ಕಾಂಗ್ರೆಸ್ನ ೆಲ್ಲಾ ಮುಖಂಡರುಗಳು ಹಾಜರಿದ್ದರು.