ಮೈಸೂರು: ಆಟೋ ಚಾಲಕನೊಬ್ಬ ರಸ್ತೆ ಬದಿ ನಿಂತಿದ್ದ ನಿರ್ಗತಿಕ ವ್ಯಕ್ತಿಯ ಮೇಲೆ ಆಟೋ ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ. ಈ ಘಟನೆ ಮೈಸೂರಿನಲ್ಲಿ ನಡೆದಿದೆ. ಗಾಂಧಿನಗರದಲ್ಲಿ ನಡೆದ ಭಯಾನಕ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಂಧಿನಗರದ ೪ನೇ ಕ್ರಾಸ್‌ನಲ್ಲಿ ಈ ಅಮಾನೀಯವಾಗಿ ಘಟನೆ ನಡೆದಿದೆ. ರಸ್ತೆ ತಿರುವಿನಲ್ಲಿ ನಿಂತಿದ್ದ ನಿರ್ಗತಿಕನ ಮೇಲೆ ಒಮ್ಮೆ ಆಟೋ ಹತ್ತಿಸಿದ ಚಾಲಕ, ಅಷ್ಟಕ್ಕೆ ತೃಪ್ತನಾಗದೇ ಪುನಃ ಆಟೋ ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ. ಇನ್ನೂ ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಮೊದಲ ಬಾರಿ ನಿರ್ಗತಿಕನ ಮೇಲೆ ಆಟೋ ಹತ್ತಿಸಿಕೊಂಡು ಹೋದ ಚಾಲಕ, ಸ್ವಲ್ಪ ದೂರ ಹೋಗಿ ಆಟೋ ತಿರುಗಿಸಿಕೊಂಡು ಬಂದು, ಕೆಳಗೆ ಬಿದ್ದು ಒದ್ದಾಡುತ್ತಿದ್ದ ನಿರ್ಗತಿಕನ ಮೇಲೆ ಪುನಃ ಆಟೋ ಹತ್ತಿಸಿದ್ದಾನೆ. ಆಟೋ ಮೈ ಮೇಲೆ ಹತ್ತಿದ್ದರಿಂದ ಗಂಭೀರವಾಗಿ ಗಾಯಗೊಂಡ ಭಿಕ್ಷುಕನನ್ನು ಸ್ಥಳೀಯರು ಕೆ. ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದಾರೆ. , ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಮದು ತಿಳಿದು ಬಂದಿದೆ.

ಆಟೋ ಚಾಲಕನ ಈ ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ದೂರು ದಾಖಲಾಗಿದ್ದು, ಆಟೋ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.