ಮಂಡ್ಯ: ರೈತರ ಕಷ್ಟಗಳನ್ನು ಅರಿತುಕೊಳ್ಳು ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಭತ್ತದ ಗದ್ದೆಗಿಳಿದು ನಾಟಿಮಾಡಲು ಮುಂದಾರು.

ಮಂಡ್ಯ ಜಿಲ್ಲೆಯ ಅರಳಕುಪ್ಪೆ ಸೀತಾಪುರದಲ್ಲಿ ಭತ್ತದ ಗದ್ದೆಗೆ ಬರುವುದಕ್ಕೂ ಮುಂಚೆ ಜೋಡೆತ್ತಿಗೆ ನಮಸ್ಕರಿಸಿದ ಮುಖ್ಯ ಮಂತ್ರಿಗಳು ಅವರ ಜೊತೆಗೆ 150 ಕೂಲಿ ಕಾರ್ಮಿಕರು ಗದ್ದೆಗಿಳಿದು ಭತ್ತನಾಟಿಮಾಡಲು ಮುಂದಾದರು.

ತುಂತುರು ಮಳೆಯನ್ನು ಲೆಕ್ಕಿಸದೆ ಗದ್ದೆಗಿಳಿದ ಕುಮಾರಸ್ವಾಮಿಯವರ ಧಣಿವಾರಿಸಲು ಜಾನಪದ ಹಾಡುಗಳು ಹುಮ್ಮಸು ಹೆಚ್ಚಿಸಿದವು. ಮುಖ್ಯ ಮಂತ್ರಿಗಳೊಬ್ಬರು ಗದ್ದೆಗಿಳಿದು ನಾಟಿ ಮಾಡಿರುವುದು ಇದೇ ಮೊದಲಿರಬೇಕು. 150 ಮಂದಿ ಕೂಲಿ ಆಳುಗಳು  ಮುಖ್ಯ ಮಂತ್ರಿಗಳ ಜೊತೆ ನಾಟಿಮಾಡುತ್ತಿರುವ ಸಂತಸ ಹೇಳ ತೀರದಾಗಿತ್ತು.

( ಸಾಂದರ್ಭಿಕ ಚಿತ್ರ)