ಬೆಂಗಳೂರು: ಕೊರೊನಾ ಹವಾಳಿಯನ್ನ ತಡೆಗಟ್ಟಲು ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿತ್ತು. ಅದ್ರಂತೆ, ಮಾಸ್ಕ್ ಹಾಕದಿದ್ರೆ 1000 ದಂಡ ವಿಧಿಸುವ ನಿಯಮವನ್ನ ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಸಧ್ಯ ಸಾರ್ವಜನಿಕರ ಒತ್ತಯಕ್ಕೆ ಮಣಿದ ಸರ್ಕಾರ ದಂಡದ ಮೊತ್ತವನ್ನ ಕಡಿಮೆಗೊಳಿಸಿದೆ.

ಹೊಸ ನಿಯಮದಂತೆ ನಗರ ಪ್ರದೇಶಗಳಲ್ಲಿ 1000 ದಂಡದ ಮೊತ್ತವನ್ನ 250 ರೂಪಾಯಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ಯಿಂದ 100 ರೂಪಾಯಿಗೆ ಇಳಿಸಿದೆ. ಇನ್ನು ಈ ಅದೇಶ ತಕ್ಷಣಕ್ಕೆ ಜಾರಿಯಾಗುವಂತೆ ಅದೇಶ ನೀಡಿದೆ.