ಒಡಿಶಾ: ಸಮಾಜಿಕ ಕಾರ್ಯಕರ್ತ, ಪದ್ಮಶ್ರೀ ಪುರಸ್ಕೃತ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಲ್ಲಿ ತಮ್ಮದೇ ಆದ ಸಹಾಯವನ್ನು ಮಾಡಿದ ವ್ಯಕ್ತಿ ಪ್ರಕಾಶ್ ರಾವ್ ಇಂದು ಕೊರೋನಾ ಕಾರಣದಿಂದಾಗಿ ಮೃತಪಟ್ಟಿದ್ದಾರೆ.

ಒಡಿಶಾದಲ್ಲಿ ತಮ್ಮ ಇಡೀ ಜೀವನವನ್ನು ಸಾಮಾಜಿಕ ಸೇವೆಗಾಗಿ ಮುಡಿಪಾಗಿಟ್ಟಿದ್ದ ಪ್ರಕಾಶ್ ರಾವ್ ಅವರು ಚಹಾ ಅಂಗಡಿಯೊAದನ್ನು ನಡೆಸುವ ಮೂಲಕ ಉದ್ಯೋಗ ಮಾಡುತ್ತಿದ್ದರು. ಇದರಿಂದ ಬಂದ ಹಣವನ್ನು ಅವರು ಪಟ್ಟಣದ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದ್ದರು.

ಕರೋನಾ ಸೋಂಕಿಗೆ ಒಳಗಾದ ನಂತರ, ಅವರು ಶ್ರೀರಾಮ್ ಚಂದ್ರ ಭಂಜ್ ವೈದ್ಯಕೀಯ ಕಾಲೇಜು ಮತ್ತು ಕಟಕ್‌ನ ಕೋವಿಡ್ ವಾರ್ಡ್ನಲ್ಲಿ ೨೦ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಸಂಜೆ ಹೃದಯಾಘಾತದಿಂದ ನಿಧನರಾದಾರೆ ಎಂದು ವರದಿಗಳು ತಿಳಿಸಿವೆ.