ನವದೆಹಲಿ: ಡಿಜಿಟಲ್ ವಹಿವಾಟು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ಕೈಗೊಂಡಿದೆ.

ಡಿ.16 ರಿಂದ ರಜಾ ದಿನ ಸೇರಿದಂತೆ ವಾರದಲ್ಲಿ ಏಳು ದಿನಗಳು ನೆಫ್ಟ್‌ ಅಡಿಯಲ್ಲಿ ವಹಿವಾಟು ನಡೆಸುವ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ.

ಈ ಮೊದಲು ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ಮತ್ತು ಮೊದಲ ಮತ್ತು ಮೂರನೇ ಶನಿವಾರದಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ನೆಫ್ಟ್ ವಹಿವಾಟು ನಡೆಸುವ ಅವಕಾಶವಿತ್ತು. ಇದೀಗ 24 ಗಂಟೆ ಸೇವೆ ಸಲ್ಲಿಸಲು ಎಲ್ಲ ತಯಾರಿ ನಡೆದಿದೆ ಎಂಬುದು ಸುದ್ದಿ.!