ಮೈಸೂರು: ರಾಮಕೃಷ್ಣ ನಗರದ ನಿವಾಸಿ ಪ್ರಶಾಂತ್ ಕುಮಾರ್‌ ವಂಚನೆಗೊಳಗಾದ ಖಾತೆದಾರ. ಎಟಿಎಂ, ಬ್ಯಾಂಕ್ ಖಾತೆ ಪುಸ್ತಕ ತಮ್ಮ ಬಳಿಯೇ ಇದ್ದರೂ ಹಣ ಡ್ರಾ ಆಗಿರುವುದನ್ನು ಕಂಡು ಪ್ರಶಾಂತ್ ಕಕ್ಕಾಬಿಕ್ಕಿಯಾಗಿದ್ದಾರೆ.

31,250 ರೂ. ಹಣ ಡ್ರಾ ಆಗಿರುವ ಬಗ್ಗೆ ನಿನ್ನೆಯಷ್ಟೇ ಮೊಬೈಲ್‌ಗೆ ಮೆಸೇಜ್ ಬಂದಿತ್ತು. ಆದ್ರೆ ಅದನ್ನು ಗಮನಿಸದ ಪ್ರಶಾಂತ್ ಇಂದು ಮೆಸೇಜ್ ಓದಿ ಹಣ ಡ್ರಾ ಆಗಿರೋ ಮಾಹಿತಿ ತಿಳಿದಿದ್ದಾರೆ.

ತಕ್ಷಣ ಸರಸ್ವತಿಪುರಂನಲ್ಲಿರುವ ಕೋಟಕ್ ಮಹೀಂದ್ರ ಬ್ಯಾಂಕ್‌ಗೆ ತೆರಳಿ ಮಾಹಿತಿ ನೀಡಿದ್ದಾರೆ. ಜೊತೆಗೆ ಸೈಬರ್ ಕ್ರೈಂಗೂ ದೂರು ನೀಡಿದ್ದಾರೆ. ಎಟಿಎಂ ಕಾರ್ಡ್ ಬಳಸದೇ ಜಾಣತನದಿಂದ ಹಣ ಡ್ರಾ ಮಾಡಿಕೊಂಡಿರೋ ಖದೀಮರ ಬಂಧನಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಆಗಾದ್ರೆ ಇನ್ನುಮುಂದೆ ಬ್ಯಾಂಕ್ ಖಾತೆಗೆ ಸ್ವಲ್ಪ ಹುಷಾರಾಗಿರಬೇಕು ಅಷ್ಟೆ