ಚಿತ್ರದುರ್ಗ: ಡಿ.ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಇ ವಾಣಿಜ್ಯ ಸಂಸ್ಥೆಗಳಾದ ಝೋಮೆಟೋ,. ಸ್ವಿಗ್ಗಿ. ಉಬರ್, ಅಮೇಝಾನ್ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು ಮನೆ ಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವ ಯುವ ಜನಾಂಗದವರಿಗೆ ಸಹಾಯವಾಗಲು ಬೈಕ್ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

 ಬೈಕ್ ಖರೀದಿಗೆ ರೂ.25000 ಸಹಾಯಧನ ನೀಡಲಾಗುತ್ತದೆ. ಉಳಿಕೆ ಮೊತ್ತವನ್ನು ಬ್ಯಾಂಕ್ ಅಥವಾ ಆಯಾ ಸಂಸ್ಥೆಗಳ ಮೂಲಕ ಸಾಲವಾಗಿ ಪಡೆದುಕೊಳ್ಳಬೇಕು. ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಸವಿತಾ, ಅಲೆಮಾರಿ ಅರೆ ಅಲೆಮಾರಿ ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ವರ್ಗ 1, 2ಎ, 3ಎ, 3ಬಿಗೆ ಸೇರಿದವರಾಗಿರಬೇಕು.

 ಆಸಕ್ತರು ಅರಸು ಅಭಿವೃದ್ದಿ ನಿಗಮದಿಂದ ಅಥವಾ www.dbcdc.karnataka.gov.in  ನಲ್ಲಿ ಪಡೆದು ಡಿಸೆಂಬರ್ 19 ರೊಳಗಾಗಿ ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 08194-220882 ದೂರವಾಣಿಗೆ ಸಂಪರ್ಕಿಸಲು ಜಿಲ್ಲಾ ವ್ಯವಸ್ಥಾಪಕ ಎನ್.ಆರ್.ಶೇಖರ್ ತಿಳಿಸಿದ್ದಾರೆ.

( ಸಾಂದರ್ಭಿಕ ಚಿತ್ರ)